ಬಿಜೆಪಿ ಬಜಕೂಡ್ಲು ಬೂತ್ ಸಮಿತಿ ರಚನಾ ಸಭೆ

ಪೆರ್ಲ: ಬಿಜೆಪಿ ಎಣ್ಮಕಜೆ ಪಂ. 12ನೇ ವಾರ್ಡು ಬಜಕೂಡ್ಲು 210ನೇ ಬೂತ್ ಸಮಿತಿ ಸಭೆ ಬಜಕೂಡ್ಲಿನ ಪದ್ಮನಾಭ ಸುವರ್ಣ ಅವರ ನಿವಾಸದಲ್ಲಿ ಜರುಗಿತು. ಪಂಚಾಯತ್ ಸಮಿತಿ ಅಧ್ಯಕ್ಷ ರಮಾನಂದ ಎಡಮಲೆ ಅಧ್ಯಕ್ಷತೆ ವಹಿಸಿದ್ದರು. ಮಂಡಲ ಸಮಿತಿ ಕಾರ್ಯದರ್ಶಿ ಸುಮಿತ್‌ರಾಜ್, ಪ್ರಧಾನ ಕಾರ್ಯದರ್ಶಿ ರಾಧಾಕೃಷ್ಣ ಭಟ್ ಪತ್ತಡ್ಕ, ಕ್ಯಾಂಪ್ಕೋ ಮಾಜಿ ಉಪಾಧ್ಯಕ್ಷ ಶಂ.ನಾ ಖಂಡಿಗೆ, ಮಂ ಜೇಶ್ವರ ಬ್ಲಾಕ್ ಪಂ. ಸದಸ್ಯೆ ವಿದ್ಯಾ ಕುಮಾರಿ, ಗ್ರಾಮ ಪಂ. ಸದಸ್ಯ ಕೃಷ್ಣಪ್ಪ ಬಜಕೂಡ್ಲು, ಹಿರಿಯ ಕಾರ್ಯಕರ್ತ ಸದಾಶಿವ ಭಟ್ ಹರಿನಿಲಯ, ಬಿಜೆಪಿ ಜಿಲ್ಲಾ ಸಮಿತಿ ಸದಸ್ಯ ಉದಯ ಚೆಟ್ಟಿಯಾರ್ ಬಜಕೂಡ್ಲು, ಪಂ. ಸಮಿತಿ ಉಪಾಧ್ಯಕ್ಷ ಅಶೋಕ್ ಉಪಸ್ಥಿತರಿದ್ದರು.
ಎಣ್ಮಕಜೆ ಪಂಚಾಯತ್ ಪೂರ್ಣಾವಧಿ ಕಾರ್ಯಕರ್ತ ಅಜೀಶ್ ಮತದಾರರ ಪಟ್ಟಿ ಪರಿಷ್ಕರಣೆ, ಚುನಾವಣಾ ತಯಾರಿ ಬಗ್ಗೆ ಮಾರ್ಗದರ್ಶನ ನೀಡಿದರು. ಈ ಸಂದರ್ಭ ಬೂತ್ ಸಮಿತಿ ಪದಾಧಿಕಾರಿಗಳ ಆಯ್ಕೆ ನಡೆಯಿತು. ಪದ್ಮನಾಭ ಸುವರ್ಣ ಅಧ್ಯಕ್ಷ ಹಾಗೂ ವಿದ್ಯಾಕುಮಾರಿ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾದರು. ಲತಾ ಕುಮಾರಿ ಖಂಡಿಗೆ ಫಲಾನುಭವಿ ಸಮಿತಿ ಸಂಚಾಲಕಿ, ಜಯಂತ ಬಜಕೂಡ್ಲು ಮನ್ ಕಿ ಬಾತ್ ಸಮಿತಿ ಸಂಚಾಲಕ, ಲೋಕೇಶ್ ಖಂಡಿಗೆ ವಾಟ್ಸಪ್ ತಂಡ ಸಂಚಾಲಕ, ಬಿ.ಎಲ್.ಎ ಆಗಿ ರಾಜೇಶ್ ಕುಲಾಲ್ ಬಜಕೂಡ್ಲು ಹಾಗೂ ಸಮಿತಿ ಸದಸ್ಯರಾಗಿ ಚಂಪಾವತಿ, ಶಾರದಾ ಖಂಡಿಗೆ, ಪುರುಷೋತ್ತಮ ನಾಯಕ್ ಖಂಡಿಗೆ, ಪುಟ್ಟಪ್ಪ ಖಂಡಿಗೆ, ರಾಧಾಕೃಷ್ಣ ಕುಲಾಲ್, ಅಶ್ವಥ್ ಬಜಕೂಡ್ಲು ಅವರನ್ನು ಆಯ್ಕೆ ಮಾಡಲಾಯಿತು.

You cannot copy contents of this page