ಎಣ್ಮಕಜೆ: ಲೈಂಗಿಕ ಕಿರುಕುಳ ಆರೋಪ ಹೊತ್ತಿರುವ ಎಣ್ಮಕಜೆ ಪಂಚಾಯತ್ ಸದಸ್ಯ ಸಿಪಿಎಂ ನೇತಾರ ಸುಧಾಕರ್ ಕೂಡಲೇ ತನ್ನ ಪಂಚಾ ಯತ್ ಸದಸ್ಯತ್ವಕ್ಕೆ ರಾಜೀನಾಮೆ ನೀಡ ಬೇಕೆಂದು ಒತ್ತಾಯಿಸಿ ಬಿಜೆಪಿ ಎಣ್ಮಕಜೆ ಪಂ. ಸಮಿತಿ ನೇತೃತ್ವ ದಲ್ಲಿ ಪ್ರತಿಭಟನೆ ಮೆರವಣಿಗೆ ನಡೆ ಯಿತು. ಬಿಜೆಪಿ ಜಿಲ್ಲಾ ಸಮಿತಿ ಉಪಾಧ್ಯಕ್ಷ ಮುರಳೀಧರ ಯಾದವ್ ಮಾತಾಡಿ ಮಹಿಳಾ ಪೀಡನೆ ಕೇಸಲ್ಲಿ ಸಿಲುಕಿರುವ ಸುಧಾಕರ ತನ್ನ ಪಂಚಾಯತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆಯನ್ನು ನೀಡಬೇಕು ಇಲ್ಲವಾದಲ್ಲಿ ಪಂ.ನಲ್ಲಿ ನಡೆಯುವ ಬೋರ್ಡ್ ಮೀಟಿಂಗ್‌ಗೆ ಪ್ರವೇಶಿ ಸಲು ಬಿಜೆಪಿ ಬಿಡುವುದಿಲ್ಲ ಎಂದು ಹೇಳಿದರು. ಪ್ರತಿಭಟನಾ ಸಭೆಯಲ್ಲಿ ಬಿಜೆಪಿ ಪಂಚಾಯತ್ ಸಮಿತಿ ಅಧ್ಯಕ್ಷ ರಮಾನಂದ ಭಟ್ ಎಡಮಲೆ, ಪ್ರಧಾನ ಕಾರ್ಯದರ್ಶಿ ರಾಧಾಕೃಷ್ಣ ಭಟ್ ಪತ್ತಡ್ಕ, ನೇತಾರರಾದ ಉದಯ ಚೆಟ್ಟಿಯಾರ್, ಸುಮಿತ್ ರಾಜ್, ಉಷಾಕುಮಾರಿ, ಲಲಿತಾ ಕೇಶವ ನಾಯ್ಕ, ಮಮತಾ ರೈ, ಪಂ. ಸದಸ್ಯರಾದ ಜಗದೀಶ್ ಕುಲಾಲ್ ನಲ್ಕ, ಕೃಷ್ಣಪ್ಪ ಬಜಕೂಡ್ಲು ಹಾಗೂ ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.







