ಕುಂಬಳೆ ಪೇಟೆಯಲ್ಲಿ ಕಟ್ಟಿ ನಿಂತ ಮಳೆನೀರು: ಬಸ್ ಪ್ರಯಾಣಿಕರಿಗೆ ಸಂಕಷ್ಟ

ಕುಂಬಳೆ: ಬೇಸಿಗೆಯ ಮಳೆ ಬಿಸಿಗೆ ಅಲ್ಪ ತಂಪು ಎರಚಿದ ಮಧ್ಯೆ ಕುಂಬಳೆಯಲ್ಲಿ ನೀರು ಕಟ್ಟಿ ನಿಂತು ಸಮಸ್ಯೆ ಸೃಷ್ಟಿಯಾಗಿದೆ. ಕುಂಬಳೆ ಪೇಟೆಯಲ್ಲಿ ಬದಿಯಡ್ಕ, ಮುಳ್ಳೇರಿಯ, ಪೇರಾಲ್ ಕಣ್ಣೂರು ಭಾಗಗಳಿಗೆ ತೆರಳುವ ಬಸ್ ತಂಗುದಾಣದ ಬಳಿಯಲ್ಲೇ ನೀರು ಕಟ್ಟಿ ನಿಂತ ಕಾರಣ ಬಸ್‌ನವರಿಗೆ ಜನರನ್ನು ಇಳಿಸಲು, ಹತ್ತಿಸಲು ಸಮಸ್ಯೆಯಾಯಿತು. ರಸ್ತೆ ನಿರ್ಮಾಣದ ವೇಳೆ ಕೈಗೊಂಡ ಅವೈಜ್ಞಾನಿಕ ಚರಂಡಿಯಿಂದಾಗಿ ಮಳೆ ನೀರು ಇಲ್ಲಿ ಕಟ್ಟಿ ನಿಲ್ಲುತ್ತಿರುವುದಾಗಿ ಸ್ಥಳೀಯರು ದೂರುತ್ತಾರೆ. ಒಂದು ಮಳೆಗೆ ಈ ರೀತಿ ಸಮಸ್ಯೆ ಉಂಟಾದರೆ ಮಳೆಗಾಲದಲ್ಲಿ ಇಲ್ಲಿನ ಅವಸ್ಥೆ ಹೇಗಿರಬಹುದು ಎಂಬ ಬಗ್ಗೆ ಸ್ಥಳೀಯರು ಪ್ರಶ್ನಿಸುತ್ತಿದ್ದು, ರಸ್ತೆ ಹಾಗೂ ಚರಂಡಿ ನಿರ್ಮಿಸಿದ ಕೆಎಸ್‌ಟಿಪಿ ಈ ಸಮಸ್ಯೆಯನ್ನು ಪರಿಹರಿಸಲು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.

ನಿನ್ನೆ ನೀರು ಕಟ್ಟಿನಿಂತ ಸ್ಥಳದಲ್ಲಿ ಜನರಿಗೆ ಬಸ್ ಇಳಿಯಲು, ಹತ್ತಲು ಸಮಸ್ಯೆಯಾದ ಹಿನ್ನೆಲೆಯಲ್ಲಿ ಬಸ್‌ಗಳನ್ನು ಇತರ ಕಡೆಗಳಲ್ಲಿ ನಿಲ್ಲಿಸಿ ಪರಿಹಾರ ಕಂಡುಕೊಳ್ಳಲಾಗಿತ್ತು. ಆದರೆ ಮುಂದೆಯೂ ಮಳೆ ಸುರಿದಾಗ ಇದೇ ಸಮಸ್ಯೆ ಉಂಟಾಗಲಿದೆ ಎಂದು ಬಸ್ ಕಾರ್ಮಿಕರು ತಿಳಿಸುತ್ತಾರೆ.

RELATED NEWS

You cannot copy contents of this page