ಬಿಜೆಪಿ ಕಾರ್ಯಕರ್ತ ನಿಧನ

ಉಪ್ಪಳ: ಮೀಂಜ ಮದಂಗಲ್ಲು ನಿವಾಸಿ ದಿ| ಕೃಷ್ಣಪ್ಪರ ಪುತ್ರ, ಬಿಜೆಪಿ ಸಕ್ರಿಯ ಕಾರ್ಯಕರ್ತ ನವೀನ (43) ನಿನ್ನೆ ಬೆಳಿಗ್ಗೆ ನಿಧನ ಹೊಂದಿ ದರು. ಮನೆಯಲ್ಲಿ ಹೃದಯÁಘಾತ ಉಂಟಾಗಿದ್ದು, ಮಂಗಳೂರಿನ ಆಸ್ಪತ್ರೆಗೆ ಸಾಗಿಸುವ ಮಧ್ಯೆ ನಿಧನ ಹೊಂದಿದ್ದಾರೆ. ಸಾರಣೆ ಮೇಸ್ತಿç ಕೆಲಸವನ್ನು ನಿರ್ವಹಿಸುತ್ತಿದ್ದರು. ಇತ್ತೀಚೆಗೆ ನಡೆದ ತ್ರಿಸ್ತರ ಪಂಚಾ ಯತ್ ಚುನಾವಣೆಯ ಪ್ರಚಾರ ಕಾರ್ಯದಲ್ಲಿ ತೊಡಗಿಸಿ ಕೊಂಡಿ ದ್ದರು. ಮದಂಗಲ್ಲು ಶ್ರೀ ಮಹಾ ಗಣಪತಿ ಭಜನಾ ಮಂದಿರದ ಸಕ್ರಿಯ ಸದಸ್ಯರಾಗಿದ್ದರು. ಮೃತರು ತಾಯಿ ದೇವಕಿ, ಪತ್ನಿ ಶಿಲ್ಪ, ಮಕ್ಕಳಾದ ತನುಷ್, ಸಿಂಚನ, ಸಹೋದರ ಜಯಂತ, ಸಹೋ ದರಿ ಸವಿತಾ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮನೆಗೆ ವಿವಿಧ ಪಕ್ಷದ ನೇತಾರರು, ಕಾರ್ಯಕರ್ತರು ಸಹಿತ ಭೇಟಿ ನೀಡಿ ಅಂತಿಮನಮನ ಸಲ್ಲಿಸಿದರು. ನಿಧನಕ್ಕೆ ಬಿಜೆಪಿ ಮೀಂಜ ಪಂಚಾ ಯತ್ ಸಮಿತಿ ಸಂತಾಪ ಸೂಚಿಸಿದೆ.

You cannot copy contents of this page