ಕಾಸರಗೋಡು: ವಿಧಾನಸಭಾ ಚುನಾವಣೆ ನಡೆಯುವ ಐದು ರಾಜ್ಯಗಳಲ್ಲಿ ಅಧಿಕಾರಿಗಳು ನಡೆಸಿದ ಕಾರ್ಯಾಚರಣೆಯಲ್ಲಿ 651.51 ಕೋಟಿ ರೂಪಾಯಿ ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳ ಲಾಗಿದೆ. ವಿಧಾನಸಭಾ ಚುನಾವಣೆ ನಡೆಯುವ ಕೇರಳ, ತಮಿಳುನಾಡು, ಅಸ್ಸಾಂ, ಪುದುಚ್ಚೇರಿ, ಪಶ್ಚಿಮ ಬಂಗಾಲ ಹಾಗೂ ಆರು ರಾಜ್ಯಗಳ ಉಪಚುನಾವಣೆ ನಡೆಯುವ ಮಂಡಲಗಳಲ್ಲಿ ಕಾನೂನು ವಿರುದ್ಧವಾಗಿ ಸಾಗಿಸುತ್ತಿದ್ದ ಹಣ, ಮದ್ಯ, ಮಾದಕವಸ್ತು, ಚಿನ್ನ ಸಹಿತ ಬೆಲೆಬಾಳುವ ಲೋಹಗಳು, ಇತರ ಸಾಮಗ್ರಿಗಳನ್ನು ವಶಪಡಿಸಲಾಗಿದೆ. ಕೇರಳದಿಂದ 57 ಕೋಟಿ ರೂಪಾ ಯಿಗಳ ಸೊತ್ತುಗಳನ್ನು ಡಿಆರ್‌ಐ ವಶಪಡಿಸಿದೆ.
ಇದರಲ್ಲಿ 41 ಕೋಟಿ ರೂಪಾಯಿಗಳ ಮಾದಕವಸ್ತು ಒಳಗೊಂಡಿದೆ. ೮ ಕೋಟಿ ರೂಪಾಯಿ ಕಾಳಧನ ವಶಪಡಿಸ ಲಾಗಿದೆ. ತಮಿಳುನಾಡಿನಿಂದ 30 ಕೋಟಿ ರೂಪಾಯಿ ನಗದು ವಶಪಡಿಸಲಾಗಿದೆ. 67 ಕೋಟಿ ರೂಪಾಯಿಗಳಮಾದಕವಸ್ತು ವಶಕ್ಕೆ ತೆಗೆಯಲಾಗಿದೆ. ಪಶ್ಚಿಮ ಬಂಗಾಲ ದಿಂದ 11 ಕೋಟಿ ರೂಪಾಯಿ ಕಾಳ ಧನ, 55 ಕೋಟಿ ರೂ.ಗಳ ಮದ್ಯ, 65 ಕೋಟಿ ರೂ.ಗಳ ಮಾದಕವಸ್ತು, 189 ಕೋಟಿ ರೂ. ಮೌಲ್ಯದ ಬೆಲೆಬಾಳುವ ಲೋಹಗಳನ್ನು ವಶಕ್ಕೆ ತೆಗೆಯಲಾಗಿದೆ.






