ಬಿಎಂಎಸ್ ಕಾರಡ್ಕ ಪಂ. ಕುಟುಂಬ ಸಂಗಮ

ಮುಳ್ಳೇರಿಯ: ಭಾರತೀಯ ಮಜ್ದೂರ್ ಸಂಘ್ (ಬಿಎಂಎಸ್) ಕಾರಡ್ಕ ಪಂಚಾಯತ್ ಕುಟುಂಬ ಸಂಗಮ ಮುಳ್ಳೇರಿಯದಲ್ಲಿ ನಡೆಯಿತು. ಬಿಎಂಎಸ್ ಜಿಲ್ಲಾ ಕಾರ್ಯದರ್ಶಿ ಕೆ.ವಿ. ಬಾಬು ಉದ್ಘಾಟಿಸಿದರು. ಪಂಚಾಯತ್ ಸಮಿತಿ ಅಧ್ಯಕ್ಷ ಸಿ.ಕೆ. ಚಂದ್ರನ್ ಅಧ್ಯಕ್ಷತೆ ವಹಿಸಿದರು.  ಭಾರತೀಯ ವಿಚಾರ ಕೇಂದ್ರ ಸ್ಥಾನೀಯ ಸಮಿತಿ ಕಾರ್ಯದರ್ಶಿ ಸೂರಜ್, ಕಾರಡ್ಕ ಗ್ರಾಮ ಪಂಚಾಯತ್ ಅಧ್ಯಕ್ಷೆ  ಜನನಿ, ಬಿಎಂಎಸ್ ಜಿಲ್ಲಾ ಜತೆ ಕಾರ್ಯದರ್ಶಿ ಲೀಲಾಕೃಷ್ಣನ್, ಪಂಚಾಯತ್ ಸದಸರಾದ ಸವಿತ, ಪ್ರಶಾಂತ್, ವಲಯ ಅಧ್ಯಕ್ಷ ಸದಾಶಿವ ಮೊದಲಾದವರು ಮಾತನಾಡಿದರು. ಬಿಎಂಎಸ್ ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯಎಂ.ಕೆ. ರಾಘವನ್ ಸಮಾರೋಪ  ಭಾಷಣ ಮಾಡಿದರು.ಕಾರ್ಯಕ್ರಮದಲ್ಲಿ ಎಸ್‌ಎಸ್‌ಎಲ್‌ಸಿ, ಪ್ಲಸ್‌ಟು ಪರೀಕ್ಷೆ ಯಲ್ಲಿ ಉತ್ತೀರ್ಣರಾದ ಮಕ್ಕಳನ್ನು ಗೌರವಿಸಲಾಯಿತು. ವಿವಿಧ ಕಲಾ, ಕ್ರೀಡಾ ಸ್ಪರ್ಧೆಗಳನ್ನು ನಡೆಸಲಾಯಿತು. ಪಂಚಾಯತ್ ಸಮಿತಿ ಕಾರ್ಯದರ್ಶಿ ಅಪ್ಪೋಜಿ ರಾವ್ ಸ್ವಾಗತಿಸಿ, ಕೋಶಾಧಿ ಕಾರಿ ದೇವಿಪ್ರಸಾದ್ ವಂದಿಸಿದರು.

You cannot copy contents of this page