ಗಡಿನಾಡ ಸಾಂಸ್ಕೃತಿಕ ವಿನಿಮಯ ಪೂರ್ವಭಾವಿ ಸಭೆ, ಕನ್ನಡ ಪತ್ರಕರ್ತರ ಸಂಘದ ಮಹಾಸಭೆ

ಬದಿಯಡ್ಕ: ನಮ್ಮ ನಾಡಿನ ಪ್ರಾಚೀನ ಪರಂಪರೆಯಲ್ಲಿ ಮೂಡಿ ಬಂದ ಕಲಾ ಪ್ರಕಾರಗಳ ಸಂರಕ್ಷಣೆಗೆ ಪ್ರಯತ್ನಗಳನ್ನು ಮಾಡಬೇಕು, ನಮ್ಮ ಯೋಚನೆ, ಯೋಜನೆಗಳು ದೀರ್ಘಕಾಲೀನ ದೃಷ್ಟಿಯೊಂದಿಗೆ ಕಾರ್ಯಾನುಷ್ಠಾನಕ್ಕೆ ಒಳಗೊಳ್ಳುವಂತಿರಬೇಕು ಎಂದು ರಾಜ್ಯ ಜೀವವೈವಿಧ್ಯ ಮಂಡಳಿಯ ನಿರ್ದೇಶಕ, ಡಿವೈಎಸ್‌ಪಿ ಡಾ. ಎ. ಬಾಲಕೃಷ್ಣನ್ ಕರೆ ನೀಡಿದರು. ಕರ್ನಾಟಕ ಜಾನಪದ ಪರಿಷತ್ತು ಕೇರಳ ಗಡಿ ನಾಡ ಘಟಕ ಹಾಗೂ ಬೇಕಲದ ಕಣ್ಣನ್ ಪಾಟಾಳಿ ಸ್ಮಾರಕ ಟ್ರಸ್ಟ್ ಆಶ್ರಯದಲ್ಲಿ ಫೆ. ೧ರಂದು ಬೇಕಲದಲ್ಲಿ ನಡೆಯಲಿರುವ ಸಾಂಸ್ಕೃತಿಕ ಜಾನಪದ ವಿನಿಮಯದ ಅಂಗವಾಗಿ ಬಳ್ಳಪದವು ನಾರಾಯಣೀಯಂ ಸಂಗೀತ ಶಾಲಾ ಸಭಾಂಗಣದಲ್ಲಿ ನಡೆದ ಪೂರ್ವಭಾವಿ ಅವಲೋಕನ ಸಭೆಯಲ್ಲಿ ಅವರು ಮಾತನಾಡಿದರು. ಜಾನಪದ ಪರಿಷತ್ ಕಾರ್ಯದರ್ಶಿ ರವಿ ನಾಯ್ಕಾಪು ಪ್ರಸ್ತಾಪಿಸಿದರು. ಕಾರ್ಯಕ್ರಮದ ರೂಪುರೇಷೆಗಳ ಬಗ್ಗೆ ವಿವರಿಸಲಾಯಿತು. 

ಕಾರ್ಯಕ್ರಮದಲ್ಲಿ ಕಾಸರಗೋಡು ಜಿಲ್ಲಾ ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ಮಹಾಸಭೆ ಜರಗಿತು.  ಸಂಘಟನೆಯ ಅಧ್ಯಕ್ಷ ರವಿ ನಾಯ್ಕಾಪು ಅಧ್ಯಕ್ಷತೆ ವಹಿಸಿದರು.  ಡಿವೈಎಸ್‌ಪಿ ಡಾ. ವಿ. ಬಾಲಕೃಷ್ಣ ಮುಖ್ಯ ಅತಿಥಿಯಾಗಿದ್ದರು. ಈ ಸಂದರ್ಭದಲ್ಲಿ ಸ್ಥಳೀಯಾಡಳಿತ ಸಂಸ್ಥೆಗಳಿಗೆ ಆಯ್ಕೆಯಾದ ಪತ್ರಕರ್ತರ ಕುಟುಂಬ ಸದಸ್ಯರಾದ ಅಶ್ವತಿ ಅಶೋಕ್, ವಿದ್ಯಾಕುಮಾರಿ, ಪ್ರಿಯಾಂಕ, ಶ್ಯಾಮ್‌ಪ್ರಸಾದ್ ಸರಳಿ, ಸುನೀನ, ಜಿ.ಪಂ.ಗೆ ಆಯ್ಕೆಯಾದ ರಾಮಪ್ಪ ಮಂಜೇಶ್ವರ ಎಂಬಿವರನ್ನು ಅಭಿನಂದಿಸಲಾಯಿತು. ಕರ್ನಾಟಕ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಸದಸ್ಯ ಎ.ಆರ್. ಸುಬ್ಬಯ್ಯಕಟ್ಟೆ, ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಕಾರ್ಯದರ್ಶಿ ಗಂಗಾಧರ ತೆಕ್ಕೆಮೂಲೆ, ಶ್ರೀಕಾಂತ್ ನೆಟ್ಟಣಿಗೆ, ಸಮಾಜಸೇವಕ ರಾಘವ ಚೇರಾಲ್, ಪ್ರೊ| ಎ. ಶ್ರೀನಾಥ್, ಕ.ಸಾ.ಪ ಗಡಿನಾಡ ಘಟಕಾಧ್ಯಕ್ಷ ಡಾ. ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ, ಕವಿ ರಾಧಾಕೃಷ್ಣ ಉಳಿಯತ್ತಡ್ಕ, ತೆಕ್ಕೇಕರೆ ಶಂಕರನಾರಾಯಣ ಭಟ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

RELATED NEWS

You cannot copy contents of this page