ಕಾಸರಗೋಡು: ಬೇಕಲ್ ಪೊಲೀಸ್ ಸಬ್ ಡಿವಿಷನ್ ವ್ಯಾಪ್ತಿಯ ಕೋಲಾಹಲ ಮೂಡಿಸಿದ್ದ ಕೊಲೆ ಪ್ರಕರಣವೊಂದರ ಆರೋಪಿಯಾದ ಯುವತಿಯನ್ನು ದೌರ್ಜನ್ಯಗೈದಿರುವುದಾಗಿ ದೂರಲಾಗಿದೆ. 34ರ ಹರೆಯದ ಯುವತಿ ನೀಡಿದ ದೂರಿನಲ್ಲಿ ಪುತ್ರನ ಗೆಳೆಯನಾದ 22ರ ಹರೆಯದ ಯುವಕನ ವಿರುದ್ಧ ಕೇಸು ದಾಖಲಿಸಲಾಗಿದೆ. 2025 ನವೆಂಬರ್ 21ರಂದು ಪ್ರಕರಣಕ್ಕೆ ಸಂಬಂಧಿಸಿದ ಘಟನೆ ನಡೆದಿದೆ. ಪುತ್ರನ ಗೆಳೆಯನಾದ ಯುವಕನ ಜೊತೆ ಕಲ್ಲಿಕೋಟೆಗೆ ತೀರ್ಥಾಟನೆಗೆ ಯುವತಿ ತೆರಳಿದ್ದರು. ಅಂದು ಕಲ್ಲಿಕೋಟೆಯ ಒಂದು ವಸತಿಗೃಹದಲ್ಲಿ ಇವರಿಬ್ಬರು ವಾಸವಾಗಿದ್ದರು. ಅಲ್ಲಿ ಯುವಕ ಮಾನಭಂಗಗೈದಿರುವುದಾಗಿಯೂ, ದೃಶ್ಯವನ್ನು ಫೋನ್‌ನಲ್ಲಿ ದಾಖಲಿಸಿರುವುದಾಗಿಯೂ ಹೇಳಲಾಗಿದೆ. ಬಳಿಕ 2 ಲಕ್ಷ ರೂ. ನೀಡದಿದ್ದರೆ ಈ ದೃಶ್ಯಗಳನ್ನು ಪತಿಗೆ ಕಳುಹಿಸಿಕೊಡುವುದಾಗಿ ಬೆದರಿಸಿದ್ದಾನೆನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಯುವತಿ ಪೊಲೀಸರಿಗೆ ದೂರು ನೀಡಿರುವುದಾಗಿ ಹೇಳಲಾಗುತ್ತಿದೆ. ಕೇಸು ದಾಖಲಿಸಿದ ಪೊಲೀಸರು ತನಿಖೆ ಆರಂಭಿಸಿದ್ದಾರೆ.






