ಕೈಯ್ಯಾರ್‌ನಲ್ಲಿ ಕೋಳಿ ಅಂಕ: ಎರಡು ಕೋಳಿಗಳ ಸಹಿತ ಇಬ್ಬರ ಸೆರೆ

ಕುಂಬಳೆ: ಕಯ್ಯಾರಿನ ಕೋಳಿ ಅಂಕ ಕೇಂದ್ರಕ್ಕೆ ಪೊಲೀಸರು ದಾಳಿ ನಡೆಸಿದ್ದಾರೆ. ಎರಡು ಕೋಳಿಗಳ ಸಹಿತ ಇಬ್ಬರನ್ನು ಕುಂಬಳೆ ಪೊಲೀಸರು ಸೆರೆ ಹಿಡಿದಿದ್ದಾರೆ. ಕಯ್ಯಾರು ಕೊಕ್ಕೆಚ್ಚಾಲ್ ನಿವಾಸಿ ಹರೀಶ್ (37), ಕಯ್ಯಾರು ನಿವಾಸಿ ಸೋಮಯ್ಯ (48) ಎಂಬಿವರನ್ನು ಕುಂಬಳೆ ಎಸ್‌ಐ ಕೆ. ಶ್ರೀಜೇಶ್ ಹಾಗೂ ತಂಡ ಸೆರೆ ಹಿಡಿದಿದೆ. ಮುಂಡತ್ತಾಯಿ ದೈವಸ್ಥಾನದ ಸಮೀಪದ ಕೋಳಿ ಅಂಕ ಕೇಂದ್ರದಿಂದ ಪೊಲೀಸರು ಇವರನ್ನು ಸೆರೆ ಹಿಡಿದಿದ್ದು, ರಹಸ್ಯ ಮಾಹಿತಿ ಲಭಿಸಿದ ಹಿನ್ನೆಲೆಯಲ್ಲಿ ತಂಡ ನಿನ್ನೆ ಮಧ್ಯಾಹ್ನ ನಂತರ ದಾಳಿ ನಡೆಸಿತ್ತು.  ಈ ವೇಳೆ ಸ್ಥಳದಲ್ಲಿದ್ದ 50ರಷ್ಟು ಮಂದಿ ಚದುರಿ ಓಡಿ ಹೋಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

You cannot copy contents of this page