ಬಜಕೂಡ್ಲು: ಕ್ಲಬ್ ಮಹಾಸಭೆ, ಜಾತ್ರೆ ಮಹೋತ್ಸವದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ನಿರ್ಧಾರ

ಪೆರ್ಲ: ಶ್ರೀ ಮಹಾಲಿಂಗೇಶ್ವರ ಆರ್ಟ್ಸ್ ಮತ್ತು ಸ್ಪೋರ್ಟ್ಸ್ ಕ್ಲಬ್‌ನ ವಾರ್ಷಿಕ ಮಹಾಸಭೆ ಇತ್ತೀಚೆಗೆ ಜರಗಿತು. ಕ್ಲಬ್ ಅಧ್ಯಕ್ಷ ಚಂದ್ರಶೇಖರ ಅಮ್ಮೆಕ್ಕಳ ಅಧ್ಯಕ್ಷತೆ ವಹಿಸಿದ್ದರು. ಪಂ. ಸದಸ್ಯ ಕೃಷ್ಣಪ್ಪ ಬಜಕೂಡ್ಲು ಮುಖ್ಯ ಅತಿಥಿಯಾಗಿದ್ದರು. ಕ್ಲಬ್‌ನ ಗೌರವಾಧ್ಯಕ್ಷ ಪದ್ಮನಾಭ ಸುವರ್ಣ ಉಪಸ್ಥಿತರಿದ್ದರು.
ಬಜಕೂಡ್ಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಾರ್ಷಿಕ ಜಾತ್ರಾಮಹೋತ್ಸವ ಸಂದರ್ಭ ಕ್ಲಬ್‌ನ ವತಿಯಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲು ತೀರ್ಮಾನಿಸಲಾಯಿತು.
ಈ ಸಂದರ್ಭ 2026-27ನೇ ಸಾಲಿನ ನೂತನ ಸಮಿತಿ ರಚಿಸಲಾಯಿತು. ಪದಾದಿsಕಾರಿಗಳಾಗಿ ಪದ್ಮನಾಭ ಸುವರ್ಣ (ಗೌರವಾಧ್ಯಕ್ಷ), ಚಂದ್ರ ಅಮೆಕ್ಕಳ (ಅಧ್ಯಕ್ಷ), ಮಹೇಶ್ ಬಜಕೂಡ್ಲು, ದಯಾನಂದ ರೈ ಬಜಕೂಡ್ಲು (ಉಪಾಧ್ಯಕ್ಷರು), ನಿತ್ಯಾನಂದ ಬಜಕೂಡ್ಲು (ಕಾರ್ಯದರ್ಶಿ), ದೀಪಕ್ ರೈ ಬಜಕೂಡ್ಲು, ಪ್ರವೀಣ್ ರೈ ಬಜಕೂಡ್ಲು (ಜತೆ ಕಾರ್ಯದರ್ಶಿಗಳು), ಹರೀಶ್ ಪೂಜಾರಿ (ಕೋಶಾಧಿಕಾರಿ), ಭರತ್ ರಾಜ್ (ಕ್ರೀಡಾ ಕಾರ್ಯದರ್ಶಿ), ಅಶ್ವಥ್ ಬಜಕೂಡ್ಲು (ಜತೆ ಕ್ರೀಡಾಕಾರ್ಯದರ್ಶಿ), ದೀಕ್ಷಿತ್ ಪೂಜಾರಿ (ಸಾಂಸ್ಕೃತಿಕ ಕಾರ್ಯದರ್ಶಿ), ರೋಹಿತ್ ಬಜಕೂಡ್ಲು (ಜತೆ ಸಾಂಸ್ಕೃತಿಕ ಕಾರ್ಯದರ್ಶಿ), ಪ್ರಕಾಶ್ ರೈ ಬಜಕೂಡ್ಲು, ರಾಜೇಶ್ ಮಾಸ್ಟರ್, ಪುರುಷೋತ್ತಮ ಬಿ.ಎಂ, ಮಹಾಬಲ ರೈ, ಚಂದ್ರಶೇಖರ ಆಚಾರ್ಯ, ನ್ಯಾಯವಾದಿ ಸಂತೋಷ್ ಶೆಟ್ಟಿ, ಪ್ರವೀಣ್ ರೈ ಪರಪ್ಪಕರಿಯ, ವರುಣ್, ದೀಪಕ್ ರೈ ಬಜಕೂಡ್ಲು, ದೀಕ್ಷಿತ್ ಶೆಟ್ಟಿ, ಸುಜಿತ್ ರೈ ಬಜಕೂಡ್ಲು, ದಾಮೋದರ ಬಜಕೂಡ್ಲು, ಕೃಷ್ಣಪ್ಪ ಬಜಕೂಡ್ಲು, ಶಿವಾನಂದ ಬಿ.ಆರ್, ಸಿಬಿಐ, ಬಾಲರಾಜ್ ರೈ ಬಜಕೂಡ್ಲು, ವರುಣ್ ಆಚಾರ್ಯ ಬಜಕೂಡ್ಲು (ಕಾರ್ಯಕಾರಿ ಸಮಿತಿ ಸದಸ್ಯರು) ಎಂಬಿವರನ್ನು ಆಯ್ಕೆ ಮಾಡಲಾಯಿತು. ಪ್ರವೀಣ್ ರೈ ಬಜಕೂಡ್ಲು ಸ್ವಾಗತಿಸಿದರು.

RELATED NEWS

You cannot copy contents of this page