ಕೊಚ್ಚಿ: ಶಬರಿಮಲೆ ದೇಗುಲದ ಚಿನ್ನ ಕಳವು ಪ್ರಕರಣದ ತನಿಖೆಗೆ ಎನ್‌ಪೋ ರ್ಸ್‌ಮೆಂಟ್ ಡೈರೆಕ್ಟರೇಟ್ (ಇಡಿ) ಕೇಂದ್ರ ಸರಕಾರ ಅನುಮತಿ ನೀಡಿದೆ. ಇದರಿಂದಾಗಿ ಇ.ಡಿ ಕೇಸ್ ಇನ್ ಫರ್ಮೇಶನ್ ವರದಿ ತಯಾರಿಸಿ ತನಿಖೆ ಆರಂಭಿಸಲಿದೆ. ಶಬರಿಮಲೆ ಚಿನ್ನ ಕಳವು ಪ್ರಕರಣದಲ್ಲಿ ಕಾಳಧನ ವ್ಯವಹಾರ ನಡೆದಿದೆ ಎಂಬ ಸ್ಪಷ್ಟ ಮಾಹಿತಿ ಲಭಿಸಿರುವ ಹಿನ್ನೆಲೆಯಲ್ಲಿ ಆ ಬಗ್ಗೆ ಇ.ಡಿ ಪರೋಕ್ಷವಾಗಿ ಈ ಹಿಂದೆಯೇ ತನಿಖೆ ಆರಂಭಿಸಿತ್ತು. ಶಬರಿಮಲೆ ಪ್ರಕರಣದ ಬಗ್ಗೆ ವಿಶೇಷ ತನಿಖಾ ತಂಡ ಈತನಕ ನಡೆಸಿದ ತನಿಖಾ ವರದಿಗಳ ಪ್ರತಿಗಳನ್ನು ಇ.ಡಿಗೆ ಹಸ್ತಾಂತರಿಸುವಂತೆ ಕಳೆದ ಡಿಸೆಂಬರ್ 19ರಂದು ವಿಜಿಲೆನ್ಸ್ ನ್ಯಾಯಾಲಯ ನಿರ್ದೇಶ ನೀಡಿತ್ತು.
ಶಬರಿಮಲೆ ದೇಗುಲದ ಗರ್ಭ ಗುಡಿಯ ದ್ವಾರಪಾಲಕ ಮೂರ್ತಿಗಳ ಚಿನ್ನ ಮಾತ್ರವಲ್ಲ ಈ ಪ್ರಕರಣದ ಆರೋಪಿಗಳು ದೇಗುಲದಿಂದ ಭಾರೀ ಪ್ರಮಾಣದ ಚಿನ್ನ ಲಪಟಾಯಿಸುವ ಸ್ಕೆಚ್ ಹಾಕಿಕೊಂಡಿ ದ್ದರೆಂದು ವಿಶೇಷ ತನಿಖಾ ತಂಡ ಹೈಕೋರ್ಟ್‌ಗೆ ಸಲ್ಲಿಸಿದ ವರದಿಯಲ್ಲಿ ತಿಳಿಸಿದೆ. ಈ ಪ್ರಕರಣದ ಆರೋಪಿಗಳಾ ಗಿರುವ ಪ್ರಾಯೋಜಕ ಉಣ್ಣಿಕೃಷ್ಣನ್ ಪೋತ್ತಿ, ಕರ್ನಾಟಕದ ಚಿನ್ನದಂಗಡಿ ಮಾಲಕ ಗೋವರ್ಧನ್ ಮತ್ತು ಚೆನ್ನೈಯ ಸ್ಮಾರ್ಟ್ ಕ್ರಿಯೇಶನ್ಸ್‌ನ ಸಿ.ಇ.ಒ ಪಂಕಜ್ ಭಂಡಾರಿ ಈ ಯೋಜನೆಗೆ ರೂಪು ನೀಡಿದ್ದರು. ಇದಕ್ಕಾಗಿ ಅವರಿಗೆ ಮುಜರಾಯಿ ಮಂಡಳಿಯ ಅಂದಿನ ಪದಾಧಿಕಾರಿಗಳು ಅಡ್ಡದಾರಿ ಮೂಲಕ ಸಹಾಯ ಒದಗಿಸಿದ್ದರು. ೨೦೨೫ ಅಕ್ಟೋಬರ್‌ನಲ್ಲಿ ಹೈಕೋ ರ್ಟ್ ಈ ಪ್ರಕರಣದ ಪರಿಶೀಲನೆ ಆರಂಭಿಸಿದಾಗ ಈ ಪ್ರಕರಣದ ಪುರಾವೆಗಳನ್ನು ನಾಶಗೊಳಿಸಲು ಈ ಮೂವರು ಆರೋಪಿಗಳು ಒಳಸಂಚು ಹೂಡಿದ್ದರು. ಇದಕ್ಕಾಗಿ ಮೂವರು ಬೆಂಗಳೂರಿನಲ್ಲಿ ಗುಪ್ತ ಸಮಾಲೋಚನೆ ನಡೆಸಿದ್ದರು. ಆರೋಪಿಗಳ ಫೋನ್ ಕರೆಗಳ ರೆಕಾರ್ಡ್‌ಗಳನ್ನು ಪರಿಶೀಲಿಸಿ ದಾಗ ಇದು ಖಾತರಿಗೊಂಡಿದೆ. ಆರೋಪಿಗಳ ಪೈಕಿ ಗೋವರ್ಧನ್ ಜಾಮೀನು ಕೋರಿ ಸಲ್ಲಿಸಿದ ಅರ್ಜಿಯ ವಿರುದ್ಧ ತನಿಖಾ ತಂಡ ಹೈಕೋರ್ಟ್‌ಗೆ ಸಲ್ಲಿಸಿದ ವರದಿಯಲ್ಲಿ ಈ ವಿಷಯ ತಿಳಿಸಲಾಗಿದೆ. ಆರೋಪಿಯ ಜಾಮೀನು ಅರ್ಜಿಯನ್ನು ನ್ಯಾಯಾಲಯ ನಾಳೆ ಪರಿಶೀಲಿಸಲಿದೆ. ಆರೋಪಿಗಳ ಪಾಲುದಾರಿಕಾ ರೀತಿಗಳನ್ನು ಗಮನಿಸು ವಾಗ ಅವರು







