ಬೆಳ್ಳೂರು: ಬಂಟ ಮಹಿಳಾ ಸಂಘದಿಂದ ಅಡುಗೆ ಸ್ಪರ್ಧೆ

ಮುಳ್ಳೇರಿಯ: ಬಂಟ ಮಹಿಳಾ ಸಂಘ ಬೆಳ್ಳೂರು ಇದರ 20ನೇ ವಾರ್ಷಿಕೋತ್ಸವದ ಪ್ರಯುಕ್ತ 13ನೇ ಕಾರ್ಯಕ್ರಮವಾದ ಬಂಟ ಅಡುಗೆ ಸ್ಪರ್ಧೆ ಅ. ೧೨ರಂದು ಪಿಂಡಗ ದಿ| ರಾಮ್‌ಮೋಹನ್ ರೈಯವರ ಮನೆಯಲ್ಲಿ ನಡೆಯಲಿದೆ. 10 ಗಂಟೆಗೆ ಸ್ಪರ್ಧೆ ಆರಂಭಗೊಳ್ಳಲಿದೆ. ಕರ್ನಾಟಕ ಧಾರ್ಮಿಕದತ್ತಿ ಇಲಾಖೆ ಸದಸ್ಯೆ ಮಲ್ಲಿಕಾ ಪಕ್ಕಳ ದೀಪ ಪ್ರಜ್ವಲನೆ ನಡೆಸುವರು. ಬಂಟ ಮಹಿಳಾ ಸಂಘ ಬೆಳ್ಳೂರು ಇದರ ಅಧ್ಯಕ್ಷೆ ಡಾ| ವಿದ್ಯಾ ಮೋಹನ್‌ದಾಸ್ ರೈ ಬೆಳ್ಳೂರು ಅಧ್ಯಕ್ಷತೆ ವಹಿಸುವರು. 11.15ರಿಂದ ಮನರಂಜನಾ ಸ್ಪರ್ಧೆ ನಡೆಯಲಿದೆ.

ಮಧ್ಯಾಹ್ನ 12ರಿಂದ ಸಭಾ ಕಾರ್ಯಕ್ರಮ ನಡೆಯಲಿದೆ. ಜಿಲ್ಲಾ ಬಂಟರ ಭವನ ನಿರ್ಮಾಣ ಸಮಿತಿ ಅಧ್ಯಕ್ಷ ಕುಳೂರು ಕನ್ಯಾನ ಡಾ. ಸದಾಶಿವ ಶೆಟ್ಟಿ ಉದ್ಘಾಟಿಸುವರು. ಬೆಳ್ಳೂರು ಬಂಟರ ಸಂಘದ ಅಧ್ಯಕ್ಷ ಮನಮೋಹನ್ ರೈ ಪಿಂಡಗ ಅಧ್ಯಕ್ಷತೆ ವಹಿಸುವರು. ಜಿಲ್ಲಾ ಬಂಟರ ಭವನ ನಿರ್ಮಾಣ ಸಮಿತಿ ಗೌರವಾಧ್ಯಕ್ಷ ಕೆ.ಕೆ. ಶೆಟ್ಟಿ, ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಜಿಲ್ಲಾ ಬಂಟರ ಸಂಘದ ಅಧ್ಯಕ್ಷ ನ್ಯಾಯವಾದಿ ಸುಬ್ಬಯ್ಯ ರೈ ಮುಖ್ಯ ಅತಿಥಿಗಳಾಗಿರುವರು. ಡಾ| ವಿದ್ಯಾ ಮೋಹನ್‌ದಾಸ್ ರೈ ಪ್ರಾಸ್ತಾವಿಕ ನುಡಿಯುವರು. ಗಣ್ಯರ ಸಹಿತ ಹಲವರು ಭಾಗವಹಿಸುವರು. 1.30ರಿಂದ ಮನರಂಜನಾ ಸ್ಪರ್ಧೆ ಮುಂದುವರಿಯಲಿದೆ.

RELATED NEWS
ಬದಿಯಡ್ಕದಲ್ಲಿ ಹಸಿರು ಕ್ರಿಯಾಸೇನೆಯಲ್ಲೂ ವಂಚನೆ: 4,000 ರೂ. ಯೂಸರ್ ಫೀಸ್ ಬ್ಯಾಂಕ್‌ನಲ್ಲಿ ಪಾವತಿಸಿ ಪಂ. ಕಚೇರಿಯಲ್ಲಿ ನೀಡಿದ ರಶೀದಿಯಲ್ಲಿ 40,000 ವಾಗಿ ತಿದ್ದುಪಡಿ; ಮಹಿಳಾ ಅಸೋಸಿಯೇಶನ್ ವಿಲ್ಲೇಜ್ ಅಧ್ಯಕ್ಷೆ ಸಹಿತ ಇಬ್ಬರನ್ನು ಕೆಲಸದಿಂದ ತೆರವು

You cannot copy contents of this page