ಮನೆಯೊಳಗೆ ದಂಪತಿ ಆತ್ಮಹತ್ಯೆಗೈದ ಸ್ಥಿತಿಯಲ್ಲಿ ಪತ್ತೆ: ಮೃತಪಟ್ಟಿರುವುದು ಬೇಕಲ ಫೆಸ್ಟ್ ವೇಳೆ ರೈಲು ಢಿಕ್ಕಿ ಹೊಡೆದು ಮೃತಪಟ್ಟ ವಿದ್ಯಾರ್ಥಿಯ ತಂದೆ, ತಾಯಿ

ಕಾಸರಗೋಡು: ಬೇಕಲ ಬೀಚ್ ಫೆಸ್ಟ್ ವೇಳೆ ರೈಲು ಢಿಕ್ಕಿ ಹೊಡೆದು ಮೃತಪಟ್ಟ ಇಂಜಿನಿಯರಿಂಗ್ ವಿದ್ಯಾ ರ್ಥಿಯ ತಂದೆ, ತಾಯಿ ಮನೆಯೊಳಗೆ ಆತ್ಮಹತ್ಯೆಗೈದ ಸ್ಥಿತಿಯಲ್ಲಿ ಪತ್ತೆಯಾಗಿ ದ್ದಾರೆ. ಪೊಯಿನಾಚಿಪರಂಬ್‌ನ ವೇಣುಗೋಪಾಲನ್ ನಾಯರ್ (55), ಪತ್ನಿ ಸ್ಮಿತಾ (45) ಎಂಬಿವರು ಮೃತಪಟ್ಟವರಾಗಿದ್ದಾರೆ. ಇಂದು ಬೆಳಿಗ್ಗೆ ಮನೆಯ ಸೆಂಟ್ರಲ್ ಹಾಲ್‌ನಲ್ಲಿ ಮೃತದೇಹಗಳು ಕಂಡು ಬಂದಿವೆ. ವಿಷಯ ತಿಳಿದು ಮೇಲ್ಪರಂಬ ಪೊಲೀ ಸರು ಸ್ಥಳಕ್ಕೆ ತಲುಪಿ ಪರಿಶೀಲನೆ ಆರಂಭಿಸಿದ್ದಾರೆ. ವೇಣುಗೋಪಾಲನ್ ನಾಯರ್- ಸ್ಮಿತಾ ದಂಪತಿಯ ಏಕೈಕ ಪುತ್ರನೂ, ಮಂಗಳೂರಿನಲ್ಲಿ ಇಂಜಿನಿಯರಿಂಗ್  ವಿದ್ಯಾರ್ಥಿಯಾಗಿದ್ದ ಎಂ. ಶಿವನಂದನ್ (19) ಡಿಸೆಂಬರ್ 29ರಂದು ರಾತ್ರಿ ಬೇಕಲದಲ್ಲಿ ರೈಲು ಢಿಕ್ಕಿ ಹೊಡೆದು ಮೃತಪಟ್ಟಿದ್ದರು. ಅಂದು ರಾತ್ರಿ ಬೇಕಲ್ ಬೀಚ್ ಫೆಸ್ಟ್‌ನಂಗವಾಗಿ ವೇಡನ್‌ರ ಸಂಗೀತ ಕಾರ್ಯಕ್ರಮದಲ್ಲಿ ಭಾಗವಹಿಸಲು ತಲುಪಿದ್ದ ವೇಳೆ ಶಿವನಂದನ್‌ರಿಗೆ ರೈಲು ಢಿಕ್ಕಿ ಹೊಡೆದು ಮೃತಪಟ್ಟ ಘಟನೆ ಸಂಭವಿಸಿತ್ತು.

You cannot copy contents of this page