ಲೈಫ್ ವಸತಿ ಯೋಜನೆ ಬುಡಮೇಲುಗೊಳಿಸುವುದಾಗಿ ಆರೋಪಿಸಿ ಸಿಪಿಎಂ ಪೈವಳಿಕೆ ಪಂ. ಮಾರ್ಚ್, ಧರಣಿ

ಪೈವಳಿಕೆ: ಪಂಚಾಯತ್ ಆಡಳಿತ ನಡೆಸುವ ಬಿಜೆಪಿ, ಐಕ್ಯರಂಗ ಮೈತ್ರಿ ಕೂಟ ಕೇರಳ ಸರಕಾರ ನೀಡುವ ಲೈಫ್ ವಸತಿ ಯೋಜನೆಯಲ್ಲಿ ಪೂರ್ಣ ಮೊತ್ತವನ್ನು ಫಲಾನುಭವಿಗಳಿಗೆ ನೀಡಲು ಸರಕಾರ ವಿತರಿಸಿದರೂ ಅದನ್ನು ಪಂಚಾಯತ್‌ನಲ್ಲಿ ಕಾರ್ಯಗತಗೊಳಿ ಸುವ ಅಧಿಕಾರಿ ತನ್ನ ಖಾತೆಯಲ್ಲಿರಿಸಿ ಕೊಂಡು ಫಲಾನುಭವಿಗಳನ್ನು ಸತಾಯಿ ಸುತ್ತಿರುವುದಾಗಿ ಸಿಪಿಎಂ ಪೈವಳಿಕೆ ಪಂಚಾಯತ್ ಸಮಿತಿ ಆರೋಪಿಸಿದೆ. ಈ ವಿಷಯವನ್ನು ಮುಂದಿಟ್ಟು ಪಂ ಚಾಯತ್ ಕಚೇರಿ ಮಾರ್ಚ್ ಹಾಗೂ ಧರಣಿ ನಡೆಸಲಾಯಿತು. ಫಲಾನುಭವಿ ಗಳು ಕಷ್ಟ ಅನುಭವಿಸುತ್ತಿದ್ದರೂ ಪಂಚಾಯತ್ ಆಡಳಿತ ಸಮಿತಿ ಮೌನ ವಹಿಸಿದೆ. ಸ್ವಜನಪಕ್ಷಪಾತ, ನಿರಂಕುಶ ಆಡಳಿತ ಇಲ್ಲಿ ನಡೆಯುತ್ತಿದೆ ಎಂದು ಮಾರ್ಚ್‌ನಲ್ಲಿ ಮಾತನಾಡಿದ ಸಿಪಿಎಂ ಮುಖಂಡರು ನುಡಿದರು. ಲೋಕಲ್ ಕಾರ್ಯದರ್ಶಿ ಚಂದ್ರ ನಾಯ್ಕ್ ಮಾನಿಪ್ಪಾಡಿ ಅಧ್ಯಕ್ಷತೆ ವಹಿಸಿದರು. ಸಿಪಿಎಂ ಏರಿಯಾ ಸದಸ್ಯ ಅಬ್ದುಲ್ ರಜಾಕ್ ಚಿಪ್ಪಾರು ಉದ್ಘಾಟಿಸಿದರು. ಏರಿಯಾ ಸದಸ್ಯರಾದ ವಿನಯಕುಮಾರ್ ಬಾಯಾರ್, ಹಾರಿಸ್ ಪೈವಳಿಕೆ, ಝಕರಿಯ ಬಾಯಾರ್ ಮಾತನಾಡಿದರು. ಅಶೋಕ್ ಭಂಡಾರಿ ಸ್ವಾಗತಿಸಿ, ಸದಾನಂದ ಕೋರಿಕ್ಕಾರ್ ವಂದಿಸಿದರು.

You cannot copy contents of this page