ಚಂಡೀಘಡ್: ಸಿಪಿಐ ಪ್ರಧಾನ ಕಾರ್ಯದರ್ಶಿಯಾಗಿ ಡಿ. ರಾಜ ಮುಂದು ವರಿಯುವರು. ಪ್ರಾಯಮಿತಿ ವಿಷಯದಲ್ಲಿ ಇವರಿಗೆ ರಿಯಾಯಿತಿ ನೀಡಲು ರಾಷ್ಟ್ರೀಯ ಎಕ್ಸಿಕ್ಯೂಟಿವ್ ತೀರ್ಮಾ ನಿಸಿತ್ತು. ಈ ಬಗ್ಗೆ ರಾಷ್ಟ್ರೀಯ ಕೌನ್ಸಿಲ್ ಇಂದು ಚರ್ಚೆ ನಡೆಸಿ ಅಂತಿಮ ತೀರ್ಮಾ ನ ಕೈಗೊಳ್ಳಲಿದೆ. ನೂತನ ಸೆಕ್ರೆಟರಿಯೇಟ್ ಸದಸ್ಯರನ್ನು ಕೂಡಾ ಇಂದು ತೀರ್ಮಾ ನಿಸಲಾಗುವುದು. ಕೇರಳ ಸಹಿತ ರಾಜ್ಯಗಳಲ್ಲಿ 75 ವರ್ಷ ಪೂರ್ತಿಗೊಂಡವರನ್ನು ಹೊರತುಪಡಿಸಲಾಗುವುದು ಎಂಬ ನಿಯಮ ಜ್ಯಾರಿಗೊಳಿಸಲಾಗಿತ್ತು. ಆದರೆ ಡಿ. ರಾಜರನ್ನು ಈ ವಿಷಯದಿಂದ ಹೊರತುಪಡಿಸುವ ಬಗ್ಗೆ ಇಂದು ತೀರ್ಮಾನ ಕೈಗೊಳ್ಳಲಾಗುವುದು. 2019ರಿಂದ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ಇವರು ಮುಂದುವರಿಯುತ್ತಿದ್ದಾರೆ.
