ಮಂಜೇಶ್ವರ: ವರ್ಕಾಡಿ ಉಜಾರ್ಪದವು ನಿವಾಸಿ ದಿ| ಸೂರ್ಯಮೂರ್ತಿ ಮಾಸ್ತರ್ ರವರ ಪುತ್ರ ಸುಮಂತ್ರಾಜ್ (44) ನಿಧನ ಹೊಂದಿದರು. ಒಂದು ವರ್ಷದಿಂದ ಅಸೌಖ್ಯದಿಂದ ಬಳಲುತ್ತಿದ್ದ ಇವರು ಕಳೆದ ಒಂದೂವರೆ ತಿಂಗಳಿAದ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯ ನಿಗಾ ಘಟಕದಲ್ಲಿ ಚಿಕಿತ್ಸೆಯಲ್ಲಿದ್ದರು. ಬಸ್ ಚಾಲಕರಾಗಿ ದುಡಿಯುತ್ತಿದ್ದರು. ಮೃತರು ಪತ್ನಿ ಗೀತಾ, ಮಕ್ಕಳಾದ ಧನುಶ್ರೀ, ಅನುಶ್ರೀ, ಆದಿತ್ಯಮೂರ್ತಿ, ಅಳಿಯ ಶರತ್, ಸಹೋದರಿ ಸ್ಮಿತಾರಾಣಿ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ತಾಯಿ ಶಾಂತಲ ಈ ಹಿಂದೆ ನಿಧನರಾಗಿದ್ದಾರೆ.







