ಕೋಳಿ ಅಂಕ: ಏಳು ಕೋಳಿಗಳ ಸಹಿತ ಏಳು ಮಂದಿ ಸೆರೆ

ಬದಿಯಡ್ಕ: ಬೇಳದಲ್ಲಿ ಕೋಳಿಅಂಕ ನಡೆಸುತ್ತಿದ್ದ ಕೇಂದ್ರಕ್ಕೆ ಬದಿಯಡ್ಕ ಪೊಲೀಸರು ನಿನ್ನೆ ದಾಳಿ ನಡೆಸಿ ಕೋಳಿಅಂಕದಲ್ಲಿ ನಿರತರಾದ ಆರೋಪದಂತೆ ಏಳು ಮಂದಿಯನ್ನು ಬಂಧಿಸಿದ್ದಾರೆ.

ಮಾತ್ರವಲ್ಲ ಕೋಳಿ ಅಂಕಕ್ಕಾಗಿ ಉಪಯೋಗಿಸುತ್ತಿದ್ದ ಏಳು ಕೋಳಿಗಳು, 3400 ರೂ. ನಗದನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬೇಳ ಮತ್ತು ಪರಿಸರ ಪ್ರದೇಶದವರಾದ ಅನಿಲ್  ಕುಮಾರ್ ಬಿ (೨೮), ಉದಯ ಕುಮಾರ್ ಡಿ (40), ನಾರಾಯಣ (42), ರವಿರಾಜ್ ಪಿ (37), ನಿತೀಶ್ ಕುಮಾರ್ ಬಿ (26), ನಾರಾಯಣ ರೈ (42) ಮತ್ತು ಅಕ್ಷಯ್ ಬಿ (34) ಎಂಬವರನ್ನು ಬಂಧಿಸಲಾಗಿದೆ.

RELATED NEWS

You cannot copy contents of this page