ಮಾನ್ಯ : ಕೆಳಗಿನ ಮನೆ ನಿವಾಸಿ ಕೃಷಿಕ ವೇಣುಗೋಪಾಲ(78) ನಿಧನರಾದರು. ಮೃತರು ಪತ್ನಿ ಶ್ಯಾಮಲ, ಮಗಳು ನಿರುಪಮ ಅಳಿಯ ಪುರುಷೋತ್ತಮ ಮಾನ್ಯ, ಸಹೋದರ, ಸಹೋದರಿಯರಾದ ಗೋವರ್ಧನ ಮಂಗಳೂರು, ಗಿರಿಧರ ಮಂಗಳೂರು, ಜಯಕುಮಾರಿ ಮಂಗಳೂರು, ತಿರುಮಲೇಶ್ವರಿ ಮಾನ್ಯ, ನಿರ್ಮಲ ಮಡಿಕೇರಿ, ಸುಮಂಗಲ ಬ್ರಹ್ಮಾವರ ಅಲ್ಲದೆ ಅಪಾರ ಬಂದು ಬಳಗವನ್ನು ಅಗಲಿದ್ದಾರೆ. ಇವರ ಸಹೋದರಿ ಜಲಜ, ಸಹೋದರಾದ ಚಂದ್ರ ಶೇಖರ, ದಯಾನಂದ ಈ ಹಿಂದೆಯೇ ನಿಧನರಾಗಿದ್ದಾರೆ. ಇವರ ನಿಧನಕ್ಕೆ ಮಾನ್ಯ, ವಿಷ್ಣುಮೂರ್ತಿನಗರದ ಬ್ರದರ್ಸ್ ಆರ್ಟ್ಸ್ ಆಂಡ್ ಸ್ಪೋರ್ಟ್ಸ್ ಕ್ಲಬ್ ತೀವ್ರ ಸಂತಾಪ ಸೂಚಿಸಿದೆ.







