ವೃದ್ದೆ ವಿರುದ್ಧ ಕೊಲೆ ಬೆದರಿಕೆ : ಕೊಲೆ ಪ್ರಕರಣದಲ್ಲಿ ಆರೋಪಿಯಾದ ಪುತ್ರ ಸೆರೆ

ಕುಂಬಳೆ: ಕೊಲೆ ಪ್ರಕರಣದಲ್ಲಿ ಆರೋಪಿಯಾದ ಪುತ್ರ ಮನೆಗೆ ನುಗ್ಗಿ ಬೆದರಿಸಿರುವುದಾಗಿ ವೃದ್ದೆಯಾದ ತಾಯಿ ಪೊಲೀಸರಿಗೆ ದೂರು ನೀಡಿದ್ದಾರೆ. ಪೈವಳಿಕೆ ಕಳಾಯಿ ನಿವಾಸಿ ಬಾಲಕಬೇಬಿ(82) ನೀಡಿದ ದೂರಿನಂತೆ ಪುತ್ರ ಜಯ ಕೆ. ಅಲಿಯಾಸ್ ಜಯರಾಂ ನೋಂಡ (54)ನನ್ನು ಪೊಲೀಸರು ಕಸ್ಟಡಿಗೆ ತೆಗೆದಿದ್ದಾರೆ.

ಬೇಬಿಯ ಇನ್ನೋರ್ವ ಪುತ್ರ ಪದ್ಮನಾಭ ಎಂಬವರನ್ನು  ಕೊಲೆಗೈದ ಪ್ರಕರಣದಲ್ಲಿ ಜಯರಾಮ್ ಆರೋಪಿಯಾಗಿದ್ದಾನೆ. ಕೊಲೆ ಪ್ರಕರಣದಲ್ಲಿ ಸಾಕ್ಷಿಯಾದ ತಾಯಿ ನ್ಯಾಯಾಲಯದಲ್ಲಿ ಹೇಳಿಕೆ ಬದಲಿಸಿ ಹೇಳಬೇಕೆಂದೂ, ಇಲ್ಲದಿದ್ದರೆ ಕೊಲೆಗೈಯ್ಯುವುದಾಗಿಯೂ ಬೆದರಿಸಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ. ಇದರ ಜೊತೆ ಸೊತ್ತಿನಲ್ಲಿ ಪಾಲು ನೀಡಬೇಕೆಂದು ಆಗ್ರಹಿಸಿಯೂ ಬೆದರಿಕೆ ಮುಂ ದುವರಿಸುತ್ತಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.

You cannot copy contents of this page