ಕಾಸರಗೋಡು: ಸೋಶ್ಯಲ್ ಮೀಡಿಯಾ ಇನ್‌ಫ್ಲುವೆನ್ಸರ್ ಚಿನ್ನು ಪಾಪು ಯಾನೆ ರೇಷ್ಮ (25)ರ ಸಾವು ನೇಣು ಬಿಗಿದು ಸಂಭವಿಸಿದೆ ಎಂದು ಮರಣೋತ್ತರ ಪರೀಕ್ಷಾ ವರದಿಯಲ್ಲಿ ತಿಳಿಸಲಾಗಿದೆ. ನಿನ್ನೆ ಮಧ್ಯಾಹ್ನ ವೇಳೆ ಕಾಸರಗೋಡು ಜನರಲ್ ಆಸ್ಪತ್ರೆ ಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಕುತ್ತಿಗೆಯಲ್ಲಿ ಬೆಡ್ ಶೀಟ್ ಬಿಗಿದ ಹಿನ್ನೆಲೆಯಲ್ಲಿ ಉಸಿರುಗಟ್ಟಿ ಸಾವು ಸಂಭವಿಸಿದೆ ಯೆಂ ದು ಮರಣೋತ್ತರ ಪರೀಕ್ಷೆಯ ಪ್ರಾಥಮಿಕ ವರದಿಯಲ್ಲಿ ತಿಳಿಸಲಾ ಗಿದೆ. ಸಮಗ್ರ ಪರಿಶೀಲನೆ ಯಂಗವಾಗಿ ‘ವಿಸಿರ’ವನ್ನು ಕಳುಹಿಸಿಕೊಡಲಾಗಿದೆ. ಅದರ ವರದಿ ಲಭಿಸಿದ ಬಳಿಕವೇ ಸಾವಿಗೆ ಕಾರಣವೇನೆಂದು ಅಂತಿಮ ವಾಗಿ ದೃಢೀಕರಿಸಲು ಸಾಧ್ಯವಿದೆ ಯೆಂದು ಪೊಲೀಸರು ತಿಳಿಸಿದ್ದಾರೆ.
ಆದೂರು ಆಲಂತಡ್ಕ ನಿವಾಸಿಯಾದ ರೇಷ್ಮ ಸೋಮವಾರ ಮಧ್ಯಾಹ್ನ ಕೂಡ್ಲು ಆಜಾದ್‌ನಗರದ ಬಾಡಿಗೆ ಕ್ವಾರ್ಟರ್ಸ್‌ನಲ್ಲಿ ಫ್ಯಾನ್‌ಗೆ ನೇಣುಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಇದೇ ವೇಳೆ ರೇಷ್ಮ ಜೊತೆ ವಾಸಿಸುತ್ತಿದ್ದ ಸಂದೇಶ್ ಎಂಬ ಯುವಕನನ್ನು ಪೊಲೀಸರು ತನಿಖೆಗೊಳಪಡಿಸಿದ್ದಾರೆ.






