ಕನ್ನಡಿಗ ವೈದ್ಯೆ ಡಾ| ಚೇತನಾರಿಗೆ ಇಂಗ್ಲೆಂಡ್‌ನ ರಾಯಲ್ ಕಾಲೇಜಿನ ಪ್ರತಿಷ್ಠಿತ ಜಾಗತಿಕ ಪ್ರಶಸ್ತಿ

ಕಾಸರಗೋಡು: ಇಂಗ್ಲೆಂಡ್‌ನ ರಾಯಲ್ ಕಾಲೇಜ್ ಆಫ್ ಸರ್ಜೆನ್ಸ್ ನೀಡುವ ಪ್ರತಿಷ್ಠಿತ ಜಾಗತಿಕ ಪ್ರಶಸ್ತಿಯಾದ ಹಾಲಟ್ ಪ್ರೈಜ್ ಮೆಡಲ್ ಪ್ರಶಸ್ತಿಯನ್ನು ಮೇಲ್ಪರಂಬ ನಿವಾಸಿ ಕನ್ನಡಿಗರಾದ ಡಾ| ಚೇತನಾ ಅವರಿಗೆ ಪ್ರದಾನ ಮಾಡಲಾ ಯಿತು. ಎಂಆರ್‌ಸಿಎಸ್ ಪರೀಕ್ಷೆಯಲ್ಲಿ ಶೇ. ೯೦ಕ್ಕಿಂತ ಹೆಚ್ಚು ಅಂಕ ಗಳಿಸಿದರೆ ಮಾತ್ರವೇ ಈ ಪ್ರಶಸ್ತಿಗೆ ಅರ್ಹತೆಯಿದೆ. ಡಾ| ಚೇತನಾ ಪ್ರಥಮ ಪ್ರಯತ್ನದಲ್ಲೇ ಶೇ. 92 ಅಂಕ ಗಳಿಸಿ ಪ್ರಥಮಸ್ಥಾನ ಪಡೆದು ಈ ಪ್ರಶಸ್ತಿಯನ್ನು ಗಳಿಸಿರುತ್ತಾರೆ. ಭಾರತದಲ್ಲಿ ಕೆಲವೇ ವೈದ್ಯರುಗಳು ಈ ಪ್ರಶಸ್ತಿಯನ್ನು ಪಡೆದಿದ್ದಾರೆ. ಕಾಸರಗೋಡಿನ ಕನ್ನಡಿಗ ವೈದ್ಯರಿಗೆ ಈ ಪ್ರಶಸ್ತಿ ಲಭಿಸಿರುವುದು ಕಾಸರಗೋಡಿನ ಕನ್ನಡಿಗರಿಗೆ ಹೆಮ್ಮೆಯ ವಿಷಯವಾಗಿದೆ.

ಮಂಗಳೂರಿನ ಎ.ಜೆ. ಮೆಡಿಕಲ್ ಕಾಲೇಜಿನಲ್ಲಿ ಇಎನ್‌ಟಿ ಸರ್ಜನ್ ಆಗಿ ಸೇವೆ ಸಲ್ಲಿಸುತ್ತಿರುವ ಡಾ| ಚೇತನಾ ಮೇಲ್ಪರಂಬರ ಕಳನಾಡ್ ನರ್ಸಿಂಗ್ ಹೋಮ್ ಮಾಲಕರೂ, ಸ್ಥಾನಿಕ ಬ್ರಾಹ್ಮಣ ಸಭಾ ಜಿಲ್ಲಾ ಮಾಜಿ ಅಧ್ಯಕ್ಷ, ಬ್ರಾಹ್ಮಣ ಪರಿಷತ್ ಜಿಲ್ಲಾ ಉಪಾಧ್ಯಕ್ಷ, ಶೈಕ್ಷಣಿಕ, ಸಾಂಸ್ಕೃತಿಕ, ಸಾಮಾಜಿಕ ಮುಂದಾಳು ಡಾ| ಎಂ. ಸತ್ಯನಾಥ್ ಹಾಗೂ ಡಾ| ಗೀತಾ ಸತ್ಯನಾಥ್‌ರ ಪುತ್ರ. ಮಂಗಳೂರು ಯೇನಪೋಯ ಮೆಡಿಕಲ್ ಕಾಲೇಜಿನ ಅಸೋಸಿಯೇಟ್ ಪ್ರೊಫೆಸರ್, ಮನೋ ವೈದ್ಯ ಡಾ| ಶಾಶ್ವತ್ ಸತ್ಯನಾಥ್‌ರ ಪತ್ನಿಯಾಗಿದ್ದಾರೆ. ಪ್ರತಿಷ್ಠಿತ ಜಾಗತಿಕ ಪ್ರಶಸ್ತಿ ಪಡೆದ ಡಾ| ಚೇತನಾರನ್ನು ಕಾಸರಗೋಡಿನ ಕನ್ನಡಿಗರು ಹಾಗೂ ಕಾಸರಗೋಡು ಬ್ರಾಹ್ಮಣ ಮಹಾಸಭಾದ ಪರವಾಗಿ ಸಂಚಾಲಕ ಜಯನಾರಾಯಣ ತಾಯನ್ನೂರು ಅಭಿನಂದಿಸಿದ್ದಾರೆ.

RELATED NEWS

You cannot copy contents of this page