ಕಾಸರಗೋಡು: ವಾಹನದಿಂದ ಸರಳುಗಳನ್ನು ಇಳಿಸುತ್ತಿದ್ದ ವೇಳೆ ಮೈ ಮೇಲೆ ಬಿದ್ದು ಚಾಲಕ ಸಾವನ್ನಪ್ಪಿದ ದಾರುಣ ಘಟನೆ ನಡೆದಿದೆ. ಕಾಸರಗೋಡು ಅಣಂಗೂರು ಕೊಲ್ಲಂಪಾಡಿ ನಿವಾಸಿ ಅಶ್ರಫ್ (56) ಸಾವನ್ನಪ್ಪಿದ ದುರ್ದೈವಿ. ನುಳ್ಳಿಪ್ಪಾಡಿ ಯಲ್ಲಿರುವ ಕಟ್ಟಡ ನಿರ್ಮಾಣ ಸಾಮಗ್ರಿ ಮಾರಾಟದಂಗಡಿಯ ವಾಹನ ಚಾಲಕನಾಗಿರುವ ಅಶ್ರಫ್ ನಿನ್ನೆ ಮಧ್ಯಾಹ್ನ ವಾಹನದಲ್ಲಿ ಸರಳು ಸಹಿತ ಕಟ್ಟಡ ನಿರ್ಮಾಣ ಸಾಮಗ್ರಿಗಳನ್ನು ಹೇರಿ ಚೆಂಗಳ ಸಂತೋಷ್‌ನಗರಕ್ಕೆ ತಲುಪಿ ಅದನ್ನು ಅಲ್ಲಿ ಇಳಿಸಲೆಂದು ವಾಹನದ ಮೇಲೇರಿ ಹಗ್ಗವನ್ನು ಬಿಡಿಸುವ ವೇಳೆ ಲಾರಿ ಒಂದು ಭಾಗಕ್ಕೆ ವಾಲಿ ಸರಳು ಸಹಿತ ಅಶ್ರಫ್‌ರ ಮೇಲೆ ಬಿದ್ದಿದೆ. ಅದನ್ನು ಕಂಡ ಅಲ್ಲಿದ್ದವರು ತಕ್ಷಣ ಅಶ್ರಫ್‌ರನ್ನು ಸಮೀಪದ ಆಸ್ಪತ್ರೆಗೆ ಸಾಗಿಸಿದರೂ ಪ್ರಾಣ ಉಳಿಸಲು ಸಾಧ್ಯವಾಗಲಿಲ್ಲ. ವಿದ್ಯಾನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.
ಚೆಮ್ನಾಡ್‌ನ ದಿ| ಮುಹಮ್ಮದ್ ಕುಂಞಿ ಮರಿಯಾ ದಂಪತಿ ಪುತ್ರನಾದ ಮೃತ ಅಶ್ರಫ್ ಪತ್ನಿ ಮರಿಯಾಂ, ಮಕ್ಕಳಾದ ಮುಬೀನಾ, ಹಾಶಿಂ, ಆದಿಲ್, ಫಾತಿಮಾ, ಅಳಿಯ ಶಮ್ಮಾಸ್, ಸಹೋದರ-ಸಹೋದರಿಯರಾದ ಹಂಸ, ಮೊಯ್ದೀನ್, ಅಬ್ದುಲ್ಲ, ಸೈನಬ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.







