ಯುವಕನಿಗೆ ಮಾರಕಾಯುಧಗಳೊಂದಿಗೆ ಹಲ್ಲೆ: ಓರ್ವ ಆರೋಪಿ ಠಾಣೆಯಲ್ಲಿ ಶರಣು

ಕುಂಬಳೆ: ಒಬ್ಬನ ಪ್ರಿಯತಮೆ ಯನ್ನು ಬೇರೊಬ್ಬ ಪ್ರೀತಿಸುತ್ತಿದ್ದಾನೆ ಎಂಬ ಕಾರಣದಿಂದ  ಯುವಕರ ಮೇಲೆ ಮಾರಕಾಯುಧಗಳಿಂದ ಆಕ್ರಮಿಸಿದ ಪ್ರಕರಣದಲ್ಲಿ ಓರ್ವ ಆರೋಪಿ ಪೊಲೀಸ್ ಠಾಣೆಯಲ್ಲಿ ಶರಣಾಗಿದ್ದಾನೆ.  ಕುಂಟಂಗೇರಡ್ಕ ನಿವಾಸಿ ಮೊಹಮ್ಮದ್ ಅನಸ್ (22) ಎಂಬಾತ ಶರಣಾಗಿದ್ದು, ಈತನಿಗೆ ನ್ಯಾಯಾಲಯ ರಿಮಾಂಡ್ ವಿಧಿಸಿದೆ.  ಮಾರ್ಚ್ ೩೦ರಂದು ಕುಂಬಳೆ ಮಾಟೆಂಗುಳಿಯ ಮೊಹಮ್ಮದ್ ಅಫ್ನಾನ್ ಫಹದ್ (19)ನ ಮೇಲೆ ಹಲ್ಲೆಗೈದು ಗಂಭೀರ ಗಾಯಗೊಳಿಸ ಲಾಗಿತ್ತು. ಈ ಪ್ರಕರಣದಲ್ಲಿ  ಮೊಹ ಮ್ಮದ್ ಅನಸ್ ಆರೋಪಿಯಾಗಿ ದ್ದಾನೆಂದು ಪೊಲೀಸರು ತಿಳಿಸಿದ್ದಾರೆ.   ಮೊಹಮ್ಮದ್ ಅಫ್ನಾನ್ ಫಹದ್ ಹಾಗೂ ಸ್ನೇಹಿತನಾದ ಅಂಗಡಿಮೊ ಗರಿನ ಯಾನಿ ಎಂಬಿವರು ಕುಂಬಳೆ  ಪೇಟೆಯಲ್ಲಿ ಹೋಟೆಲೊಂದರ ಸಮೀಪ ನಿಂತಿದ್ದ ವೇಳೆ ಎರಡು ಕಾರುಗಳಲ್ಲಿ ತಲುಪಿದ   8 ಮಂದಿಯ ತಂಡ ಮಾರ ಕಾಯು ಧಗಳೊಂದಿಗೆ ಆಕ್ರಮಿಸಿತ್ತು. ಈ ವೇಳೆ ಯಾನಿ ಓಡಿ ಪರಾರಿಯಾಗಿದ್ದನು.  ಅಂಗಡಿಮೊಗರಿನ ಯಾನಿ ಬೇರೋಬ್ಬನ ಪ್ರಿಯತಮನೆಯನ್ನು ಪ್ರೀತಿ ಸುತ್ತಿದ್ದನೆನ್ನಲಾಗಿದೆ. ಈ ದ್ವೇಷದಿಂದ ತಂಡ ಯಾನಿಯ ಮೇಲೆ ದ್ವೇಷ ತೀರಿಸಲು ಮುಂದಾಗಿತ್ತೆಂದು ಹೇಳಲಾಗುತ್ತಿದೆ.

RELATED NEWS

You cannot copy contents of this page