ಔಷಧಿ ಅಂಗಡಿ ಮಾಲಕರಾಗಿದ್ದ ಅಬ್ದುಲ್ ಅಜೀಜ್ ನಿಧನ

ಬಾಯಾರು: ಇಲ್ಲಿನ ವಿಲ್ಲೇಜ್ ಕಚೇರಿ ಬಳಿ ವಾಸವಾಗಿರುವ ಆವಳ ಸಾಗು ನಿವಾಸಿ ದಿ| ಅಬ್ಬಾಸ್ ಹಾಜಿ- ದಿ| ಝುಲೈಕ ದಂಪತಿ ಪುತ್ರ ಈ ಹಿಂದೆ ಔಷಧಿ ಅಂಗಡಿ ಮಾಲಕರಾಗಿದ್ದ ಅಬ್ದುಲ್ ಅಜೀಜ್ ಸಾಗು (58) ನಿಧನ ಹೊಂದಿ ದರು. ಅಸೌಖ್ಯ ನಿಮಿತ್ತ ಚಿಕಿತ್ಸೆಯಲ್ಲಿದ್ದರು. ಇಂದು ಬೆಳಿಗ್ಗೆ ನಿಧನ ಸಂಭವಿಸಿದೆ. ಸಾಮಾಜಿಕ, ಧಾರ್ಮಿಕ ಕಾರ್ಯಗಳಲ್ಲಿ ಸಕ್ರಿಯರಾಗಿದ್ದರು. ಮೃತರು ಪತ್ನಿ ಮುಮ್ರಾಜ್, ಮಕ್ಕಳಾದ ಜುಲೈಕತ್ ನೂರ, ಮುನಾವರ, ತನ್ವೀರ, ಮರಿಯಮ್ಮ, ಮೊಹ ಮ್ಮದ್ ಅಯಾನ್, ಸಹೋದರರಾದ ಮುಹಮ್ಮದ್, ಅಬ್ದುಲ್ ರಜಾಕ್, ಇಸ್ಮಾಯಿಲ್, ಸುಲೈಮಾನ್ ಖಾಸಿಮಿ, ಸಹೋದರಿಯರು ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.  ಮನೆಗೆ ಪೈವಳಿಕೆ ಪಂ. ಉಪಾಧ್ಯಕ್ಷ ರಾಘವೇಂದ್ರ ಭಟ್, ಐಕ್ಯರಂಗದ ಮುಖಂಡರಾದ ವಸಂತ ಕುಮಾರ್, ಹಮೀದ್ ಕುಂಞಲಿ, ಅಬ್ದುಲ್ಲ ಹಾಜಿ, ಝಡ್.ಎ. ಕಯ್ಯಾರ್, ಅಸೀಸ್ ಕಳಾಯಿ ಭೇಟಿ ನೀಡಿ ಸಂತಾಪ ಸೂಚಿಸಿದ್ದಾರೆ. 

You cannot copy contents of this page