ಡಿವೈಎಸ್‌ಪಿಗಳಿಗೆ ಮತ್ತೆ ವರ್ಗಾವಣೆ : ಕಾರಡ್ಕ ನಿವಾಸಿ ಕೆ. ವಿನೋದ್ ಬೇಕಲ ಡಿವೈಎಸ್‌ಪಿ

ಕಾಸರಗೋಡು: ಗೃಹ ಸಚಿವ ರಮೇಶ್ ಚೆನ್ನಿತ್ತಲ ಜಿಲ್ಲೆಯ ವಿವಿಧ ಕಡೆಗಳ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಮರಳಿದ ಬೆನ್ನಲ್ಲೇ ಜಿಲ್ಲೆಯ ಮೂರು ಡಿವೈಎಸ್‌ಪಿಯವರನ್ನು ಮತ್ತೆ ವರ್ಗಾವಣೆ ಮಾಡಲಾಗಿದೆ. ಕಾಸರಗೋಡು ಸ್ಟೇಟ್ ಸ್ಪೆಷಲ್ ಬ್ರಾಂಚ್ ಡಿವೈಎಸ್‌ಪಿಯಾಗಿ ನೀಲೇಶ್ವರ ನಿವಾಸಿಯಾದ ಎಂ. ಸುನಿಲ್ ಕುಮಾರ್‌ರನ್ನು ನೇಮಕ ಮಾಡಲಾಗಿದೆ. ಪ್ರಸ್ತುತ ಜಿಲ್ಲಾ ಸ್ಪೆಷಲ್ ಬ್ರಾಂಚ್ ಡಿವೈಎಸ್‌ಪಿ ಆಗಿದ್ದಾರೆ.

ಮೊದಲ ವರ್ಗಾವಣೆ ಯಾದಿಯಲ್ಲಿ ಸುನಿಲ್ ಕುಮಾರ್‌ರನ್ನು ಪಾಲಕ್ಕಾಡ್‌ಗೆ ವರ್ಗಾಯಿಸಲಾಗಿತ್ತು. ಇದು ಪೊಲೀಸ್ ಸೇನೆಯಲ್ಲಿ ಅಸಮಾಧಾನಕ್ಕೆ ಕಾರಣವಾಗಿತ್ತು. ಬೇಕಲ ಡಿವೈಎಸ್‌ಪಿಯಾಗಿ ಈ ಮೊದಲು ವಿ.ಕೆ. ವಿಶ್ವಂಭರನ್‌ರನ್ನು ನೇಮಕ ಮಾಡಲಾಗಿತ್ತು. ಇದರ ವಿರುದ್ಧ ಕಾಂಗ್ರೆಸ್ ಪಕ್ಷದ ಪೆರಿಯ, ಕಲ್ಯೋಟ್ ಘಟಕ ನೇತೃತ್ವ ಪ್ರತಿಭಟಿಸಿದ್ದು, ಗೃಹ ಸಚಿವರಿಗೆ ದೂರು ನೀಡಿತ್ತು. ಇದರ ಆಧಾರದಲ್ಲಿ ವಿಶ್ವಂಭರನ್‌ರನ್ನು ಕಾಸರಗೋಡು ವಿಜಿಲೆನ್ಸ್ ಆಂಡ್ ಆಂಟಿ ಕರೆಪ್ಶನ್ ಬ್ಯೂರೋಗೆ ವರ್ಗಾಯಿಸಲಾಗಿತ್ತು. ಕೆ. ವಿನೋದನ್  ಬೇಕಲದ ನೂತನ ಡಿವೈಎಸ್‌ಪಿ ಆಗಿದ್ದಾರೆ. ಕಾರಡ್ಕ ನಿವಾಸಿಯಾದ ವಿನೋದ್ ಪ್ರಸ್ತುತ ತಾಮರಶ್ಶೇರಿ ಡಿವೈಎಸ್‌ಪಿಯಾಗಿದ್ದಾರೆ. ಈ ಮೊದಲು ಎಸ್‌ಎಸ್‌ಬಿ ಡಿವೈಎಸ್‌ಪಿಯಾಗಿ ನೇಮಕಗೊಂಡಿದ್ದ ಟಿ. ಉತ್ತಮ್‌ದಾಸ್‌ರನ್ನು ಎಸ್‌ಎಂಎಸ್‌ನಲ್ಲಿ ನೇಮಕ ಮಾಡಲಾಗಿದೆ. ಡಿವೈಎಸ್‌ಪಿಯವರ ವರ್ಗಾವಣೆ ಯಾದಿ ಪೂರ್ಣಗೊಂಡ ಬೆನ್ನಲ್ಲೇ ಪೊಲೀಸ್ ಇನ್ಸ್‌ಪೆಕ್ಟರ್‌ಗಳ, ಸರ್ಕಲ್ ಇನ್ಸ್‌ಪೆಕ್ಟರ್‌ಗಳ ವರ್ಗಾವಣೆ ಯಾದಿ ಹೊರ ಬರಲಿದೆ.

You cannot copy contents of this page