ಹೊಸದುರ್ಗ: ಹಿತ್ತಿಲಲ್ಲಿ ಬೆಂಕಿ ತಗಲಿ ಗಾಯಗೊಂಡು ಚಿಕಿತ್ಸೆಯಲ್ಲಿದ್ದ ವೃದ್ದೆ ಮೃತಪಟ್ಟರು. ಪಿಲಿಕ್ಕೋಡ್ವಯಲ್ನ ಮೀನು ಕಾರ್ಮಿಕೆ ಪುದಿಯಡವನ್ ಮಾಧವಿ (73) ಮೃತಪಟ್ಟವರು. ಈ ತಿಂಗಳ ೨ರಂದು ಸಂಜೆ ಮನೆ ಹಿತ್ತಿಲಿನಲ್ಲಿ ಇವರಿಗೆ ಬೆಂಕಿ ತಗಲಿತ್ತು. ಕಣ್ಣೂರು ಸರಕಾರಿ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ನಿನ್ನೆ ಇವರು ಮೃತಪಟ್ಟರು. ಚಂದೇರ ಪೊಲೀಸರು ಮಹಜರು ನಡೆಸಿದರು. ಮೃತರು ಪುತ್ರ ಪಿ. ಚಂದ್ರನ್, ಸೊಸೆ ಎಂ. ಉಷಾ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಇವರ ಪತಿ ಕಾರ್ಯತ್ ಕಣ್ಣನ್ ಈ ಹಿಂದೆ ನಿಧನ ಹೊಂದಿದ್ದಾರೆ.







