ವಿಧಾನಸಭಾ ಚುನಾವಣೆ: ಎಡರಂಗದ ನಾಯಕತ್ವ ಮತ್ತೆ ಪಿಣರಾಯಿ ವಿಜಯನ್‌ಗೆ

ನವದೆಹಲಿ: ಕೇರಳ ವಿಧಾನಸಭೆಗೆ ನಡೆಯಲಿರುವ ಚುನಾವಣೆಯಲ್ಲಿ ಎಡರಂಗದ ನಾಯಕತ್ವವನ್ನು ಮುಖ್ಯಮಂತ್ರಿ ಪಿಣರಾಯಿ ವಿಜಯನ್  ವಹಿಸಲಿದ್ದಾರೆಂದು ಸಿಪಿಎಂ ಪ್ರಧಾನ ಕಾರ್ಯದರ್ಶಿ ಎಂ.ಎ. ಬೇಬಿ ತಿಳಿಸಿದ್ದಾರೆ.  ಇದರಂತೆ ಎಡರಂಗದ ಚುನಾವಣಾ ಪ್ರಚಾರದ ನೇತೃತ್ವವನ್ನು ಪಿಣರಾಯಿ ವಿಜಯನ್‌ರೇ ವಹಿಸಲಿದ್ದಾರೆ.  ಅಲ್ಲದೆ ಅವರು ತಮ್ಮ ಸ್ವ ಕ್ಷೇತ್ರವಾದ ಕಣ್ಣೂರು ಜಿಲ್ಲೆಯ ಧರ್ಮಡಂ ವಿಧಾನಸಭಾ ಕ್ಷೇತ್ರದಲ್ಲಿ ಮತ್ತೆ  ಸ್ಪರ್ಧಿಸುವುದು ಖಚಿತಗೊಂಡಿದೆ. ಚುನಾವಣೆಯಲ್ಲಿ ಸ್ಪರ್ಧಿಸುವ ಸಿಪಿಎಂ ಅಭ್ಯರ್ಥಿಗಳ ಯಾದಿಯನ್ನು  ಮಾರ್ಚ್‌ನಲ್ಲಿ ಪ್ರಕಟಿಸಲಾಗುವುದೆಂದು ಎಂ.ಎ. ಬೇಬಿ ತಿಳಿಸಿದ್ದಾರೆ.  ಇದೇ ವೇಳೆ ಪಿಣರಾಯಿ ವಿಜಯನ್ ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸಬೇಕೇ ಎಂಬ ವಿಷಯದಲ್ಲಿ ಸಿಪಿಎಂನ ಕೇರಳ ಘಟಕ ಈತನಕ ಯಾವುದೇ ತೀರ್ಮಾನ ಕೈಗೊಂಡಿಲ್ಲ. ಪಿಣರಾಯಿ ವಿಜಯನ್ ಸಿಪಿಎಂ ಪೋಲಿಟ್ ಬ್ಯೂರೋ ಸದಸ್ಯನಾಗಿದ್ದು, ಆದ್ದರಿಂದ ಅವರು ಮತ್ತೆ ಚುನಾವಣೆಯಲ್ಲಿ ಸ್ಪರ್ಧಿಸಬೇಕೇ ಎಂಬ ಬಗ್ಗೆ  ಪೋ ಲಿಟ್ ಬ್ಯೂರೋ ತೀರ್ಮಾನಿಸಲಿದೆ ಯೆಂದು ನೇತಾರರು ಹೇಳುತ್ತಿದ್ದಾರೆ.

You cannot copy contents of this page