ಬಸ್‌ನೊಳಗೆ ಬಿದ್ದು ಸಿಕ್ಕಿದ ಚಿನ್ನವನ್ನು ವಾರಸುದಾರರಿಗೆ ಹಸ್ತಾಂತರಿಸಿ ಪ್ರಾಮಾಣಿಕತೆ ಮೆರೆದ ನೌಕರರು

ಕುಂಬಳೆ: ಬಸ್‌ನಲ್ಲಿ ಬಿದ್ದು ಸಿಕ್ಕಿದ ಚಿನ್ನದ ಬ್ರೇಸ್‌ಲೆಟ್‌ನ್ನು ಅದರ ವಾರಸುದಾರರಿಗೆ ಹಸ್ತಾಂತರಿಸಿ ಬಸ್ ನೌಕರರು ಪ್ರಾಮಾಣಿಕತೆ ಮೆರೆದಿದ್ದಾರೆ. ನಿನ್ನೆ ಸಂಜೆ ೪ ಗಂಟೆಗೆ ಕುಂಬಳೆಯಿಂದ ಧರ್ಮತ್ತಡ್ಕಕ್ಕೆ ತೆರಳುತ್ತಿದ್ದ  ಮಹಾಲಕ್ಷ್ಮಿ ಬಸ್‌ನಲ್ಲಿ ಪ್ಲಸ್‌ಟು ವಿದ್ಯಾರ್ಥಿನಿಯಾದ ಅಲೀಮತ್ ಶಮ್ನಾ ಎಂಬಾಕೆಯ  ಒಂದು ಪವನ್ ತೂಕದ ಬ್ರೇಸ್‌ಲೆಟ್ ಕಳೆದುಹೋಗಿತ್ತು.  ನಾಯ್ಕಾಪಿನಲ್ಲಿ ಬಸ್ಸಿಳಿದು ಮನೆಗೆ ಹೋಗುತ್ತಿದ್ದಾಗ ಬ್ರೇಸ್‌ಲೆಟ್ ಕಳೆದುಹೋಗಿರುವ ಬಗ್ಗೆ ವಿದ್ಯಾರ್ಥಿನಿಯ ಅರಿವಿಗೆ ಬಂದಿದೆ. ಈ ಮಧ್ಯೆ ಬಸ್‌ನೊಳಗೆ ನೌಕರರಿಗೆ  ಬ್ರೇಸ್‌ಲೆಟ್ ಬಿದ್ದು ಸಿಕ್ಕಿತ್ತು. ಚಾಲಕ ಧರ್ಮತ್ತಡ್ಕ ಬಾಳಿಗದ ಸೋಮನಾಥ, ಕಂಡಕ್ಟರ್ ಮುಗುವಿನ ಆಶಿಕ್ ಎಂಬಿವರು ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ರವಾನಿಸಿ  ಚಿನ್ನದ ವಾರಸುದಾರರಿಗಾಗಿ ಶೋಧ ಆರಂಭಿಸಿದ್ದರು. ಈ ವಿಷಯ ತಿಳಿದು ಸಂಜೆ 6 ಗಂಟೆ ವೇಳೆ ವಿದ್ಯಾರ್ಥಿನಿ ಚಿನ್ನ ಪಡೆದುಕೊಳ್ಳಲು ಕುಂಬಳೆಗೆ ತಲುಪಿದ್ದಾಳೆ. ಕುಂಬಳೆ ಪೊಲೀಸ್ ಠಾಣೆಯಲ್ಲಿ ಪೊಲೀಸರ ಉಪಸ್ಥಿತಿ ಯಲ್ಲಿ  ಬಸ್ ನೌಕರರು ಅಲೀಮತ್ ಶಮ್ನಾಳಿಗೆ ಚಿನ್ನ ಹಸ್ತಾಂತರಿಸಿದರು.

ಕಳೆದ ವರ್ಷ ಇದೇ ಬಸ್‌ನಲ್ಲಿ 2 ಲಕ್ಷ ರೂಪಾಯಿ ಇದೇ ನೌಕರರಿಗೆ ಬಿದ್ದು ಸಿಕ್ಕಿತ್ತು. ಅದನ್ನು  ಕೂಡಾ ವಾರಸುದಾರರಿಗೆ ಹಸ್ತಾಂತರಿಸಿ ನೌಕರರು ಮಾದರಿಯಾಗಿದ್ದರು. ಬಸ್ ನೌಕರರ ಪ್ರಾಮಾಣಿಕತೆಯನ್ನು ನಾಗರಿಕರು ಹಾಗೂ ಪೊಲೀಸ್ ಅಧಿಕಾರಿಗಳು ಅಭಿನಂದಿಸಿದ್ದಾರೆ.

ಪ್ರಯಾಣಿಕರು ಜಾಗ್ರತರಾಗಿರಬೇಕಾಗಿ ಪೊಲೀಸ್ ಕರೆ

ಕುಂಬಳೆ:  ಬಸ್‌ನಲ್ಲಿ ಪ್ರಯಾಣಿ ಸುವ  ಮಹಿಳೆಯರ ಸಹಿತ ಇತರರು ತಮ್ಮ ಚಿನ್ನಾಭರಣ, ಹಣ, ಬೆಲೆಬಾಳುವ ವಸ್ತುಗಳ ಬಗ್ಗೆ ಜಾಗ್ರತೆ ವಹಿಸಬೇಕೆಂದು ಕುಂಬಳೆ ಠಾಣೆ ಪೊಲೀಸ್ ಇನ್‌ಸ್ಪೆಕ್ಟರ್ ಟಿ.ಕೆ. ಮುಕುಂದನ್ ಕರೆ ನೀಡಿದ್ದಾರೆ. ಇತ್ತೀ ಚೆಗಿನಿಂದ ಬಸ್‌ಗಳಲ್ಲಿ ಪ್ರಯಾಣಿಕರ ಹಣ, ಚಿನ್ನಾಭರಣ ಕಳವು ಪ್ರಕರಣಗಳು ವ್ಯಾಪಕಗೊಂಡಿದೆ. ಹೆಚ್ಚಾಗಿ ಕೆಎಸ್‌ಆರ್‌ಟಿಸಿ ಬಸ್‌ಗ ಳಲ್ಲೇ ಕಳವು ನಡೆಯುತ್ತಿರುವುದಾಗಿ ಗಮನಕ್ಕೆ ಬಂದಿದೆ. ಆದ್ದರಿಂದ ಪ್ರಯಾಣಿಕರು  ತಮ್ಮ ಬೆಲೆಬಾಳುವ ವಸ್ತುಗಳ ಬಗ್ಗೆ ಸ್ವತಃ ಜಾಗ್ರತೆ ವಹಿಸಬೇ ಕೆಂದು ಇನ್‌ಸ್ಪೆಕ್ಟರ್ ತಿಳಿಸಿದ್ದಾರೆ.

You cannot copy contents of this page