ಪೆರ್ಲ: ಹಿಂದೂ ಸಂಗಮ ಆಯೋಜನಾ ಸಮಿತಿ ಎಣ್ಮಕಜೆ ಪಂ. ಸಮಿತಿ ಆಶ್ರಯದಲ್ಲಿ ಪೆರ್ಲ ಪೇಟೆ ವಠಾರದಲ್ಲಿ ನಡೆದ ಬೃಹತ್ ಹಿಂದೂ ಸಂಗಮ ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರ ಒಡಿಯೂರಿನ ಸಾಧ್ವಿ ಶ್ರೀ ಮಾತಾನಂದಮಯಿ ಉದ್ಘಾಟಿಸಿ ಆಶೀರ್ವಚನ ನೀಡಿದರು. ಆಧ್ಯಾತ್ಮಿಕತೆಯೊಂದಿಗೆ ಭೌತಿಕ ಶಕ್ತಿ ಸೇರಿಕೊಂಡಾಗ ಮಹತ್ವದ ಶ್ರೇಯಸ್ಸು ಕಾಣಲು ಸಾಧ್ಯ. ಶ್ರೇಷ್ಠ ದಾರ್ಶನಿಕರನ್ನು ವಿಶ್ವಕ್ಕೆ ನೀಡಿರುವ ಹೆಗ್ಗಳಿಕೆ ಭಾರತಕ್ಕಿದೆ. ಧರ್ಮ ಹಾಗೂ ದೇಶದ ಪರಂಪರೆಯನ್ನು ಉಳಿಸಿ ಬೆಳೆಸುವಲ್ಲಿ ಸಮಸ್ತ ಹಿಂದೂ ಸಮಾಜಕ್ಕೆ ಮಹತ್ವದ ಜವಾಬ್ದಾರಿಯಿದೆ. ಆರೆಸ್ಸೆಸ್‌ನ ನೂರನೇ ವರ್ಷಾಚರಣೆಯ ಮಹತ್ವದ ಕಾಲಘಟ್ಟದಲ್ಲಿ ಧರ್ಮ, ಸಂಸ್ಕೃತಿ, ಪರಂಪರೆ ಸಂರಕ್ಷಣೆಯ ಜವಾಬ್ದಾರಿಯುತ ಚಟುವಟಿಕೆಗಳಲ್ಲಿ ಹಿಂದೂಸಮಾಜ ಕೈಜೋಡಿಸ ಬೇಕಾದ ಅನಿವಾರ್ಯತೆಯಿರು ವುದಾಗಿ ಸಾಧ್ವಿ ಶ್ರೀ ತಿಳಿಸಿದರು.
ಡಾ. ಸತ್ಯನಾರಾಯಣ ಪುಣಿಂಚಿತ್ತಾಯ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕೇರಳ ಹಿಂದು ಐಕ್ಯವೇದಿಯ ಕಾರ್ಯಾಧ್ಯಕ್ಷ ವಲ್ಸನ್ ತಿಲ್ಲಂಗೇರಿ ದಿಕ್ಸೂಚಿ ಭಾಷಣ ಮಾಡಿದರು. ಹಿಂದು ಸಂಗಮ ಆಯೋಜನಾ ಸಮಿತಿ ಅಧ್ಯಕ್ಷ ಸುಬ್ಬ ಪಾಟಾಳಿ ಕುತ್ತಾಜೆ ಅಧ್ಯಕ್ಷತೆ ವಹಿಸಿದ್ದರು. ಕವಯಿತ್ರಿ ಸುಜಯ ಸಜಂಗದ್ದೆ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ವಿವಿಧ ಧಾರ್ಮಿಕ ಕೇಂದ್ರಗಳ ಮೊಕ್ತೇಸರರಾದ ಕೃಷ್ಣ ಶ್ಯಾನುಭಾಗ್ ಬಜಕೂಡ್ಲು, ಕೃಷ್ಣ ಭಟ್ ರೆಂಜೆತಮೂಲೆ, ಐತ್ತು ನಾಯ್ಕ್ ಬಜಕೂಡ್ಲು ಉಪಸ್ಥಿತರಿದ್ದರು. ಹರೀಶ್ ಕುಲಾಲ್ ಸ್ವಾಗತಿಸಿದರು. ಸ್ವರ್ಣಲತಾ ಜಿ.ಶೆಟ್ಟಿ ಪ್ರಾರ್ಥನೆ ಹಾಡಿದರು. ಪುಟ್ಟಪ್ಪ ಖಂಡಿಗೆ ವಂದಿಸಿದರು.
ಕಾರ್ಯಕ್ರಮಕ್ಕೂ ಮೊದಲು ಪೆರ್ಲ ಸನಿಹದ ಇಡಿಯಡ್ಕ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ವಠಾರದಿಂದ ಪೆರ್ಲ ಪೇಟೆವರೆಗೆ ಸಾಂಸ್ಕೃತಿಕ ಶೋಭಾಯಾತ್ರೆ ನಡೆಯಿತು. ಕುಣಿತ ಭಜನೆ, ಮಕ್ಕಳಿಂದ ವಿವಿಧ ವೇಷಗಳು, ಚೆಂಡೆಮೇಳ, ಮುತ್ತುಕೊಡೆ, ಗೊಂಬೆಕುಣಿತದೊAದಿಗೆ ಮೆರವಣಿಗೆ ನಡೆಯಿತು.
ತುಳುನಾಡ ಗಾನ ಗಂಧರ್ವ ಬಿರುದಾಂಕಿತ ಪುತ್ತೂರು ಜಗದೀಶ್ ಆಚಾರ್ಯ ಮತ್ತು ಬಳಗದವರಿಂದ ಭಕ್ತಿಗೀತೆ, ಜಾನಪದ ಗೀತೆ ಹಾಗೂ ರಾಷ್ಟ್ರ ಭಕ್ತಿಗೀತೆಗಳನ್ನೊಳಗೊಂಡ ಗಾನ ಸಂಭ್ರಮ ನಡೆಯಿತು.







