ನಾಲ್ಕೂವರೆ ಲಕ್ಷದಷ್ಟು ಕುಟುಂಬಗಳು ಭೂಮಿಯ ಹಕ್ಕುದಾರರಾಗಿ ಬದಲಾದರು-ಮುಖ್ಯಮಂತ್ರಿ

ಕಾಸರಗೋಡು: ಕಳೆದ 10 ವರ್ಷದೊಳಗೆ ನಾಲ್ಕೂವರೆ ಲಕ್ಷದಷ್ಟು ಕುಟುಂಬಗಳು ಭೂಮಿಯ ಹಕ್ಕುದಾರರಾಗಿ ಬದಲಾದರೆಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನುಡಿದರು. ರಾಜ್ಯ ಮಟ್ಟದ ಪಟ್ಟಾ ಮೇಳದಂಗವಾಗಿ ಕಾಸರಗೋಡು ಜಿಲ್ಲಾ ಮಟ್ಟದ ಪಟ್ಟೆ ಮೇಳವನ್ನು ಕಾಞಂಗಾಡ್ ಮಿನಿ ಸಿವಿಲ್ ಸ್ಟೇಷನ್‌ನಲ್ಲಿ ಆನ್‌ಲೈನ್ ಆಗಿ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಒಂದು ಕುಟುಂಬದ ನಾಲ್ಕು ಮಂದಿ ಎಂಬ ಲೆಕ್ಕದಂತೆ 40 ಲಕ್ಷ ವ್ಯಕ್ತಿಗಳು, ನಾಲ್ಕೂವರೆ ಲಕ್ಷ ಪಟ್ಟೆಗಳ ಫಲಾನುಭವಿಗಳಾದರು. ಕಳೆದ ಸರಕಾರದ ಕಾಲದಲ್ಲಿ ಪ್ರಳಯ, ಅತಿವೃಷ್ಠಿ, ಕೊರೊನಾ, ನಿಫಾ ಮೊದಲಾದ ವಿಕೋಪಗಳು ಉಂಟಾದಾಗಲೂ, 1,77,011 ಭೂ ಹಕ್ಕು ಪತ್ರಗಳನ್ನು ವಿತರಿಸಲಾಗಿದೆ. ಬಳಿಕವೂ ಆಡಳಿತ ಲಭಿಸಿದಾಗ ಮೊದಲ ಹಂತದಲ್ಲಿ 54,535 ಭೂಹಕ್ಕು ಪತ್ರಗಳನ್ನು, ಬಳಿಕ 67,069 ಪಟ್ಟೆಗಳನ್ನು ಹಾಗೂ ಮತ್ತೆ ಎರಡು ಹಂತಗಳಲ್ಲಾಗಿ 31,499 ಹಾಗೂ 27,784 ಭೂಹಕ್ಕು ಪತ್ರಗಳನ್ನು ವಿತರಿಸಲಾಯಿತು. ದ್ವಿತೀಯ ಬಾರಿಯ ಮೊದಲ ಮೂರು ವರ್ಷದಲ್ಲಿ ಈ ಸಾಧನೆ ಮಾಡಲಾಗಿದೆ. ಬಳಿಕ ವಿವಿಧ ಹಂತಗಳಲ್ಲಾಗಿ ಭೂ ಹಕ್ಕು ಪತ್ರಗಳನ್ನು ವಿತರಿಸಲಾಯಿತು.

ಇಂದು ರಾಜ್ಯ ಮಟ್ಟದ ಪಟ್ಟೆ ಮೇಳದಲ್ಲಿ ವಿತರಿಸುವ 27,752 ಭೂಹಕ್ಕು ಪತ್ರಗಳು ಸೇರಿದಾಗ ಒಟ್ಟು ನಾಲ್ಕೂವರೆ ಲಕ್ಷ ಭೂಹಕ್ಕು ಪತ್ರಗಳು ಎಂಬ ಗುರಿಗೆ ತಲುಪಿದೆ ಸರಕಾರ ಎಂದು ನಿನ್ನೆ ನಡೆದ ಕಾರ್ಯಕ್ರಮದಲ್ಲಿ ಅವರು ನುಡಿದರು.

ಭೂಮಿ ಹಾಗೂ ಮನೆ ಲಭ್ಯಗೊಳಿಸುವುದು ಎಂಬುದು ಸರಕಾರದ ಘೋಷಿತ ನಿಲುವು ಆಗಿದೆ ಎಂದು ಜಾಗತೀಕರಣ ಅದೇ ರೀತಿಯಲ್ಲಿ ಜ್ಯಾರಿಗೊಳಿಸಿದ್ದರೆ ಕಾರ್ಪೊರೇಟರ್‌ಗಳಿಗೆ ಮಾತ್ರ ಬೆಳವಣಿಗೆ ಉಂಟಾಗುತ್ತಿತ್ತು ಎಂದು, ಸರಕಾರದ ಬದಲಿ ನೀತಿಯ ಕಾರಣದಿಂದಾಗಿ ವಸತಿರಹಿತರು ಹಾಗೂ ಭೂ ರಹಿತರು ಇಲ್ಲದ ಕೇರಳ ಎಂಬ ಭರವಸೆಯನ್ನು ಪಾಲಿಸಲ್ಪಟ್ಟಿದೆ. ಲೈಫ್ ವಸತಿ ಯೋಜನೆ ಪ್ರಕಾರ ೫ ಲಕ್ಷ ಮಂದಿಗೆ ಮನೆ ನೀಡಲಾಯಿತೆಂದು ಮುಖ್ಯಮಂತ್ರಿ ತಿಳಿಸಿದರು.

ನಾಲ್ಕೂವರೆ ಲಕ್ಷ ಭೂಹಕ್ಕು ಪತ್ರಗಳನ್ನು ನೀಡಲು ಸಾಧ್ಯವಾಗಿರುವುದು ಸರಕಾರದ ದೊಡ್ಡ ಸಾಧನೆ ಎಂದು ಜಿಲ್ಲಾ ಮಟ್ಟದ ಪಟ್ಟೆ ಮೇಳದಲ್ಲಿ ಅಧ್ಯಕ್ಷತೆ ವಹಿಸಿದ ಶಾಸಕ ಇ. ಚಂದ್ರಶೇಖರನ್ ನುಡಿದರು. ಇದರಲ್ಲಿ ಕಂದಾಯ ಇಲಾಖೆಯ ಪಾತ್ರ ಬಹಳ ದೊಡ್ಡದಿದೆ.  ಭೂ ಹಕ್ಕು ಪತ್ರ ನೀಡಲು ಸಾಧ್ಯವಾಗದ ಕೆಲವೊಂದು ಪ್ರಕರಣಗಳನ್ನು ಪರಿಹರಿಸಲು ಸಾಧ್ಯವಾಗಬೇಕು ಎಂದು ಅವರು ನುಡಿದರು. ಪಟ್ಟೆ ಮೇಳದಲ್ಲಿ 73 ಟ್ರೈಬಲ್ ಸಹಿತ 659 ಭೂಹಕ್ಕು ಪತ್ರಗಳನ್ನು ವಿತರಿಸಲಾಯಿತು. ಇದರೊಂದಿಗೆ ಜಿಲ್ಲೆಯಲ್ಲಿ 5 ವರ್ಷದ ಮಧ್ಯೆ ವಿತರಿಸಿದ ಭೂ ಹಕ್ಕು ಪತ್ರಗಳ ಸಂಖ್ಯೆ 6,844 ಆಯಿತು. ಹೊಸದುರ್ಗ ತಾಲೂಕಿನಲ್ಲಿ 42 ಎಲ್‌ಎ, ವೆಳ್ಳರಿಕುಂಡ್ ತಾಲೂಕಿನಲ್ಲಿ 154 ಎಲ್‌ಎ, ಕಾಸರಗೋಡು ತಾಲೂಕಿನಲ್ಲಿ 123 ಎಲ್‌ಎ, ಮಂಜೇಶ್ವರದಲ್ಲಿ 79 ಎಲ್‌ಎ ಪಟ್ಟೆಗಳನ್ನು ವಿತರಿಸಲಾಯಿತು.

ಸಂಸದ ರಾಜ್‌ಮೋಹನ್ ಉಣ್ಣಿತ್ತಾನ್, ಶಾಸಕ ಸಿ.ಎಚ್. ಕುಂಞಂಬು, ಕಾಞಂಗಾಡ್ ನಗರಸಭಾ ಅಧ್ಯಕ್ಷ ವಿ.ವಿ. ರಮೇಶನ್, ವಾರ್ಡ್ ಕೌನ್ಸಿಲರ್ ಪಿ.ವಿ. ಚಂದ್ರನ್, ತಹಶೀಲ್ದಾರ್‌ಗಳು, ಕಂದಾಯ ಇಲಾಖೆ ಅಧಿಕಾರಿಗಳು, ವಿವಿಧ ರಾಜಕೀಯ ಪಕ್ಷದ ಪ್ರತಿನಿಧಿಗಳು ಭಾಗವಹಿಸಿದರು. ಜಿಲ್ಲಾಧಿಕಾರಿ ಕೆ. ಇಂಭಶೇಖರ್ ಸ್ವಾಗತಿಸಿ, ಎಡಿಎಂ ಪಿ. ಅಖಿಲ್ ವಂದಿಸಿದರು.

You cannot copy contents of this page