ಪಾಲಕ್ಕಾಡ್: ನಟಿ ಮಂಜುವಾರ್ಯರ್ಗೆ ಅಭಿಮಾನಿ ಚುಂಬಿಸಿದ ಘಟನೆಯ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಪಾಲಕ್ಕಾಡ್ನ ಜ್ಯುವೆಲ್ಲರಿ ಶೋರೂಂ ಒಂದರ ಉದ್ಘಾಟನಾ ಕಾರ್ಯಕ್ರಮ ಮಧ್ಯೆ ಘಟನೆ ನಡೆದಿದೆ. ಕಾರ್ಯಕ್ರಮದಲ್ಲಿ ಅಭಿಮಾನಿಗಳೊಂದಿಗೆ ಸಂವಾದ ನಡೆಸುತ್ತಿದ್ದ ವೇಳೆ ಓರ್ವೆ ವೇದಿಕೆಗೆ ತಲುಪಿ ನಟಿಯನ್ನು ಅಪ್ಪಿ ಚುಂಬಿಸಿದ್ದಾಳೆ. ಈ ವೇಳೆ ನಿರೂಪಕಿ ಮೀರಾ ಅನಿಲ್ ವೇದಿಕೆಯಲ್ಲಿದ್ದರು. ಘಟನೆ ನಡೆದ ಕೂಡಲೇ ನಿರೂಪಕಿ ಹಾಗೂ ಭದ್ರತಾ ನೌಕರರು ಮಹಿಳೆಯನ್ನು ವೇದಿಕೆಯಿಂದ ದೂರ ಕರೆದೊಯ್ದರು. ಹೀಗಿದ್ದರೂ ಅನಿರೀಕ್ಷಿತವಾಗಿ ನಡೆದ ಈ ಘಟನೆಯಿಂದ ಮಂಜು ವಾರ್ಯರ್ ವಿಚಲಿತೆಯಾಗದೆ ಕಾರ್ಯಕ್ರಮವನ್ನು ಮುಂದುವರಿಸಿದ್ದಾರೆ.
ಸಾರ್ವಜನಿಕ ಸಮಾರಂಭ ಗಳಲ್ಲಿ ಸೆಲೆಬ್ರಿಟಿಗಳ ವಿರುದ್ಧ ಈ ರೀತಿಯ ವರ್ತನೆಗಳು ಅಂಗೀಕರಿಸಲು ಸಾಧ್ಯವಿಲ್ಲವೆಂದು ನಿರೂಪಕಿ ಈ ವೇಳೆ ಅಭಿಪ್ರಾಯಪಟ್ಟಿದ್ದಾಳೆ.







