ಸಿಪಿಐ ಕಚೇರಿಯಲ್ಲಿ ಕೃಷಿಕ ನೇಣುಬಿಗಿದು ಸಾವು

ಕೋಟ್ಟಯಂ: ಸಿಪಿಐ ಕಚೇರಿಯಲ್ಲಿ ಕೃಷಿಕ ನೇಣುಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ವೈಕ್ಕಂ ತಲಯಾಳಂನಲ್ಲಿರುವ ಸಿಪಿಐ ಕಚೇರಿಯಲ್ಲಿ ಇಂದು ಬೆಳಿಗ್ಗೆ ಮೃತದೇಹ ಕಂಡುಬಂದಿದೆ. ಕೃಷಿಕನಾದ ಚೆಲ್ಲಪ್ಪನ್ (67) ಎಂಬವರು ಮೃತ ವ್ಯಕ್ತಿಯೆಂದು ತಿಳಿದುಬಂದಿದೆ. ಸಿಪಿಐ ಜಿಲ್ಲಾ ನೇತಾರರು ಉಪಜೀವನ ಮಾರ್ಗವನ್ನು ಇಲ್ಲದಾಗಿಸಿದ್ದಾರೆಂದು ಸಾಮಾಜಿಕ ಜಾಲತಾಣಗಳಲ್ಲಿ ಚೆಲ್ಲಪ್ಪನ್ ಇತ್ತೀಚೆಗೆ ಆರೋಪಿಸಿದ್ದರು. ಕೃಷಿ ನಾಶಗೊಳಿಸಿದರೂ ತನ್ನ ಉತ್ಪನ್ನಗಳಿಗೆ ಮಾರುಕಟ್ಟೆಯಲ್ಲಿ ಬೇಡಿಕೆ ಇಲ್ಲದಂತೆ ಮಾಡಿದರು ಮುಂತಾದ ಆರೋಪಗಳನ ಚೆಲ್ಲಪ್ಪನ್ ಹೊರಿಸಿದ್ದರು. ಕಳೆದ ಕೆಲವು ಕಾಲದಿಂದ ಸಿಪಿಐ ನೇತಾರರೊಂದಿಗೆ ಚೆಲ್ಲಪ್ಪನ್ ತರ್ಕದಲ್ಲಿದ್ದರೆನ್ನಲಾಗಿದೆ.  ಇದೇ ವೇಳೆ ಚೆಲ್ಲಪ್ಪನ್‌ರ ಸಾವಿನ ಹಿನ್ನೆಲೆಯಲ್ಲಿ ಸಂಬಂಧಿಕರು ಹಾಗೂ ಸ್ಥಳೀಯರು ಪ್ರತಿಭಟನೆಗಿಳಿದಿದ್ದಾರೆ. ಆರ್‌ಡಿಒ ತಲುಪದೆ ಮೃತದೇಹವನ್ನು ತೆರವುಗೊಳಿಸುವುದಿಲ್ಲವೆಂದು ಸಂಬಂಧಿಕರು ತಿಳಿಸಿದ್ದಾರೆ.

You cannot copy contents of this page