ಕನ್ನೆಪ್ಪಾಡಿ ಆಶ್ರಯ ಆಶ್ರಮಕ್ಕೆ ಧನ ಸಹಾಯ ಹಸ್ತಾಂತರ

ಬದಿಯಡ್ಕ: ಪುತ್ತಿಗೆ ಪಂ ಚಾಯತ್ ವಿರಾಟ್ ಹಿಂದು ಸಂಗಮ ಕಾರ್ಯಕ್ರಮದಲ್ಲಿ ಸಂಗ್ರಹವಾದ ಮೊತ್ತದಲ್ಲಿ ಉಳಿತಾಯವಾಗಿರುವ 9250 ರೂ.ವನ್ನು ಕನ್ನೆಪ್ಪಾಡಿ ಆಶ್ರಯ ಆಶ್ರಮಕ್ಕೆ ಹಸ್ತಾಂತರಿಸಲಾಯಿತು. ಈ ಸಂದರ್ಭದಲ್ಲಿ ವಿರಾಟ್ ಹಿಂದು ಸಂಗಮ ಕಾರ್ಯಕ್ರಮದ ಅಧ್ಯಕ್ಷ ದಾಮೋದರ ಡಿ., ರಕ್ಷಾ ಅಧಿಕಾರಿಗಳಾದ ಅಶೋಕ ಮಾಸ್ತರ್, ವಿಘ್ನೇಶ್ವರ ಮಾಸ್ತರ್, ಆಶ್ರಮದ ಟ್ರಸ್ಟಿಗಳಾದ ರಮೇಶ ಕಳೇರಿ, ಬಾಲಕೃಷ್ಣ ಏಣಿಯರ್ಪ, ಇತರರಾದ ಗಂಗಾಧರ ಪಳ್ಳತ್ತಡ್ಕ, ಪ್ರೋ. ಶ್ರೀನಾಥ್ ಉಪಸ್ಥಿತರಿದ್ದರು.

You cannot copy contents of this page