ಬೇಕರಿಯಲ್ಲಿ ಬೆಂಕಿ ಅನಾಹುತ

ಕಾಸರಗೋಡು: ನಗರದ ಹೊಸ ಬಸ್ ನಿಲ್ದಾಣ ಕಟ್ಟಡದಲ್ಲಿರುವ ಬೇಕರಿಯೊಂದರಲ್ಲಿ ನಿನ್ನೆ ರಾತ್ರಿ ಬೆಂಕಿ ಕಾಣಿಸಿಕೊಂಡಿದ್ದು ಅಗ್ನಿಶಾಮಕದಳ ನಡೆಸಿದ ಕಾರ್ಯಾಚರಣೆಯಿಂದ ಭಾರೀ ಅನಾಹುತ ತಪ್ಪಿಹೋಗಿದೆ.  ಸತೀಶ್ ಕೋಟೆಕಣಿ ಎಂಬವರ ಮಾಲಕತ್ವದ ಶ್ರೀಲಕ್ಷ್ಮಿ ಬೇಕರಿಯಲ್ಲಿ ನಿನ್ನೆ ರಾತ್ರಿ ಸುಮಾರು 1 ಗಂಟೆ ವೇಳೆ ಬೆಂಕಿ ಕಾಣಿಸಿಕೊಂಡಿದೆ. ವಿಷಯ ತಿಳಿದು ಅಗ್ನಿಶಾಮಕದಳ ತಕ್ಷಣ ತಲುಪಿ ಬೆಂಕಿ ನಂದಿಸಿದೆ. ಬೆಂಕಿ ತಗಲಿದ ಪರಿಣಾಮ ಬೇಕರಿಯೊಳಗಿದ್ದ  ಭಾರೀ ಪ್ರಮಾಣದ ಸಾಮಗ್ರಿಗಳು ಉರಿದು ನಾಶಗೊಂಡಿವೆ. ಬೆಂಕಿ ತಗಲಲು ಕಾರಣ ತಿಳಿದುಬಂದಿಲ್ಲ. ಇದೇ ಬೇಕರಿ  ಕ್ಯಾಂಟೀನ್ ಆಗಿಯೂ ಕಾರ್ಯವೆಸಗುತ್ತಿದೆ.

You cannot copy contents of this page