ಕುಂಬಳೆ: ಸಾಮಾಜಿಕ, ಸಾಂಸ್ಕೃತಿಕ, ಕ್ಷೇಮ ಚಟುವಟಿಕೆಗಳಲ್ಲಿ ನಿರತನಾಗಿದ್ದ ಮಾಜಿ ಅಬುದಾಬಿ ಕೆಎಂಸಿಸಿ ನೇತಾರನೂ, ದುಬೈ ಮಲಬಾರ್ ಕಲಾ ಸಾಂಸ್ಕೃತಿಕೆಯ ವೇದಿಕೆ ಕೋಶಾಧಿಕಾರಿಯಾದ ಸಯ್ಯಿದ್ ಶಾಹುಲ್ ಹಮೀದ್ ತಂಙಳ್ ಮಾಳಿಗ ಕುಂಬೋಲ್ (53) ನಿಧನ ಹೊಂದಿದರು. ದುಬೈಯಲ್ಲಿ ಅಲ್‌ಜಬೀನ್ ಎಂಬ ಸಂಸ್ಥೆಯ ಮೆನೇಜಿಂಗ್ ಡೈರಕ್ಟರ್ ಆಗಿದ್ದರು. ಮಂಗಳೂರಿನ ಆಸ್ಪತ್ರೆಯಲ್ಲಿ ನಿನ್ನೆ ರಾತ್ರಿ ನಿಧನ ಸಂಭವಿಸಿದೆ. ದಿ| ಕುಂಬೋಲ್ ಸಯ್ಯಿದ್ ಮುಹಮ್ಮದ್ ತಂಙಳ್ ಮಾಳಿಗ-ಮೈಮೂನ ಬೀವಿ ದಂಪತಿ ಪುತ್ರನಾದ ಮೃತರು ಪತ್ನಿ ಸಯ್ಯಿದತ್ ಅಸ್ಮಾ ಬೀವಿ, ಮಕ್ಕಳಾದ ಸಯ್ಯಿದ್ ಇಸ್ಮಾಯಿಲ್, ಹಾಶಿರ್ ಸಯ್ಯಿದ್ ಶಮ್ಮಾಸ್, ಮೈಮೂನತ್ ಹಮ್ನ, ಸಹೋದರರಾದ ಸಯ್ಯಿದ್ ಅಲಾವಿ ಕುವೈತ್, ಸಯ್ಯಿದ್ ತಾಜುದ್ದೀನ್ ಮಾಳಿಗ, ಸಯ್ಯಿದ್ ಬದ್ರುದ್ದೀನ್ ತಂಙಳ್ ದುಬೈ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.






