ಕಾಸರಗೋಡು: ರೈಲ್ವೇಯ ಅಗತ್ಯಕ್ಕೆಂದು ತಿಳಿಸಿ ಬಾಡಿಗೆಗೆ ಪಡೆದ ಆಡಂಬರ ಕಾರುಗಳನ್ನು ಮರಳಿ ನೀಡ ದೆ ವಂಚಿಸಿರುವುದಾಗಿ ದೂರಲಾಗಿದೆ.
ಮೊಗ್ರಾಲ್ ಪೇರಾಲ್ನ ಮೆಹ್ರೂಫ್ ಮಂಜಿಲ್ನ ಕೆ.ಎಂ. ಮುಜೀಬ್ ರಹ್ಮಾನ್ರ ದೂರಿನ ಮೇರೆಗೆ ಹೊಸದುರ್ಗ ಬಿ.ಎಂ.ಜೆ ಕ್ವಾರ್ಟರ್ಸ್ನಲ್ಲಿ ವಾಸಿಸುವ ಶಂಸುದ್ದೀನ್ ಮುಹಮ್ಮದ್ (44) ವಿರುದ್ಧ ಕಾಸರಗೋಡು ನಗರ ಠಾಣೆ ಪೊಲೀಸರು ವಂಚನೆ ಕೇಸು ದಾಖಲಿಸಿದ್ದಾರೆ.
2025 ಜುಲೈ 1 ಹಾಗೂ ೩೧ರ ಮಧ್ಯೆಗಿನ ದಿನಗಳಲ್ಲಿ ಅಣಂಗೂರಿನಲ್ಲಿ ದೂರುದಾತ ಹಾಗೂ ಅವರ ಸಹೋ ದರನ, ಮಾವನ ಮಾಲಕತ್ವದಲ್ಲಿರುವ ಎರಡು ಕ್ರೆಟ್ ಕಾರುಗಳು ಹಾಗೂ ಒಂದು ಇನ್ನೋವ ಕಾರನ್ನು ತಿಂಗಳಿಗೆ 30,000 ರೂ. ಬಾಡಿಗೆಗೆ ಪಡೆದುಕೊಂಡಿರುವುದಾಗಿಯೂ ಆದರೆ ಅನಂತರ ಬಾಡಿಗೆಯನ್ನೋ ಅಥವಾ ಕಾರನ್ನೋ ಮರಳಿ ನೀಡಿಲ್ಲವೆಂದು ದೂರಿನಲ್ಲಿ ತಿಳಿಸಲಾಗಿದೆ.







