ನಿಧನ ರಿಜಿಸ್ಟರ್‌ನಲ್ಲಿ ಮೃತಪಟ್ಟ ಮಹಿಳೆಯ ಪತಿಯ ಹೆಸರು ಬದಲಾಯಿಸಿ ವಂಚನೆ: ತನಿಖೆ ಆರಂಭ

ಉಪ್ಪಳ:  ರಿಜಿಸ್ಟರ್‌ನಲ್ಲಿ ಮೃತಪಟ್ಟ ಮಹಿಳೆಯ ಪತಿಯ ಹೆಸರನ್ನು ತಿದ್ದುಪಡಿಮಾಡಿ ವಂಚನೆ ನಡೆಸಿರುವುದಾಗಿ ದೂರಲಾಗಿದೆ. ಪೈವಳಿಕೆ ಪಂಚಾಯತ್ ಕಾರ್ಯದರ್ಶಿ ಕಾಸರಗೋಡು ಎಎಸ್‌ಪಿ ಅಶೋಕ್ ಅಚ್ಯುತನ್‌ರಿಗೆ ನೀಡಿದ ದೂರಿನ ಪ್ರಕಾರ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ. 2011ರ  ನಿಧನ ರಿಜಿಸ್ಟರ್‌ನಲ್ಲಿ  ವಂಚನೆ ನಡೆಸಿರು ವುದಾಗಿ ದೂರಲಾಗಿದೆ. 2011 ಅಗೋಸ್ತ್ 17ರಂದು ಮೃತಪಟ್ಟ ಕಮಲ ಎಂಬವರ ಪತಿಯ  ಹೆಸರು ತುಕ್ರ ಎಂದು ದಾಖಲಿಸಲಾಗಿತ್ತು. ಇದನ್ನು ತಿರುಚಿ ಗುರುವ ಎಂದು ಬರೆದು ವಂಚನೆ ನಡೆಸಲಾಗಿದೆ ಎಂಬುದಾಗಿ ದೂರಲಾಗಿದೆ. ಈ ವಂಚನೆ ನಡೆಸಿದವರು ಯಾರೆಂದೂ, ಯಾವ ಉದ್ದೇಶದಿಂದ ಇದನ್ನು ನಡೆಸ ಲಾಗಿದೆ ಯೆಂದು  ತಿಳಿದುಬಂ ದಿಲ್ಲ. ಪ್ರಸ್ತುತ ಈ ಪ್ರಕರಣಕ್ಕೆ ಸಂಬಂಧಿಸಿ ಯಾರನ್ನೂ ಆರೋಪಿ ಯಾಗಿ ಸೇರಿಸಿಲ್ಲ. ಈ ಕುರಿತು ಸಮಗ್ರ ತನಿಖೆ ನಡೆಯುತ್ತಿದೆಯೆಂದು ಪೊಲೀಸರು ತಿಳಿಸಿದ್ದಾರೆ.

RELATED NEWS

You cannot copy contents of this page