ಜೂಜಾಟ:5 ಮಂದಿ ಸೆರೆ; 24050 ರೂ.ನಗದು ವಶ

ಬದಿಯಡ್ಕ: ಉಕ್ಕಿನಡ್ಕದ ಕೇರಳ ಪ್ಲಾಂಟೇಶನ್ ಕಾರ್ಪರೇಷನ್ ಡೈರಿ ಫಾಂಗೆ ತೆರಳುವ ರಸ್ತೆ ಬಳಿಯ ಸಾರ್ವಜನಿಕ ಸ್ಥಳದಲ್ಲಿ ಹಣವಿರಿಸಿ ನಡೆಸುತ್ತಿದ್ದ ಜೂಜಾಟ ಕೇಂದ್ರಕ್ಕೆ ಬದಿಯಡ್ಕ ಪೊಲೀಸರು ನಿನ್ನೆ ದಾಳಿ ನಡೆಸಿ ಐದು ಮಂದಿಯನ್ನು ಬಂಧಿಸಿ ಕೇಸು ದಾಖಲಿಸಿಕೊಂಡಿದ್ದಾರೆ. ಜುಗಾರಿ ಅಡ್ಡೆಯಿಂದ 24050 ರೂ. ನಗದು ಪತ್ತೆಹಚ್ಚಿ ವಶಕ್ಕೆ ತೆಗೆದುಕೊಳ್ಳಲಾಗಿದೆ.

ಬದಿಯಡ್ಕದ ಶಶಿಕುಮಾರ್ (40), ಪಡ್ರೆಯ ಪ್ರದೀಪ್ ಕೆ. (36), ಉಕ್ಕಿನಡ್ಕದ ಪ್ರದೀಪ್ ಕೆ.ಜಿ.(27), ಮೊಹಮ್ಮದ್ ರಫೀಕ್ (43) ಮತ್ತು ಬದಿಯಡ್ಕದ ರವಿ (43) ಎಂಬಿವರು  ಬಂಧಿತ ವ್ಯಕ್ತಿಗಳು.

You cannot copy contents of this page