ಅಭಿಭಾಷಕ ಪರಿಷತ್‌ನಿಂದ ಗುರುವಂದನೆ

ಕಾಸರಗೋಡು: ಗುರು ಪೂರ್ಣಿಮೆಯಂದು ಭಾರತೀಯ ಅಭಿಭಾಷಕ ಪರಿಷತ್ ಕಾಸರಗೋಡು ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಗುರುವಂದನಾ ಕಾರ್ಯಕ್ರಮ ವನ್ನು ಏರ್ಪಡಿಸಲಾಯಿತು. ಕಾಸರಗೋಡಿನ ಹಿರಿಯ ವಕೀಲರಾದ ಐ.ವಿ. ಭಟ್ ಹಾಗೂ ಅಡೂರು ಉಮೇಶ್ ನಾಯï್ಕರನ್ನು ಅವರ ನಿವಾಸಗಳಿಗೆ ತೆರಳಿ ಗೌರವಿಸಲಾಯಿತು. ಅಭಿಭಾಷಕ ಪರಿಷತ್ ರಾಜ್ಯ ಉಪಾಧ್ಯಕ್ಷ ಅಡ್ವಕೇಟ್ ಬಿ. ರವೀಂದ್ರನ್, ಜಿಲ್ಲಾ ಅಧ್ಯಕ್ಷ ಅಡ್ವಕೇಟ್ ಎ.ಸಿ ಅಶೋಕ್ ಕುಮಾರ್, ಜಿಲ್ಲಾ ಕಾರ್ಯದರ್ಶಿ ಅಡ್ವಕೇಟ್ ನವೀನ್ ರಾಜ್, ಅಡ್ವಕೇಟ್ ಕರುಣಾ ಕರ ನಂಬಿಯಾರ್ ಮಾತನಾಡಿದರು. ರಾಜೇಶ್, ವಕೀಲರಾದ ಪ್ರಕಾಶ್ ರಾವ್, ಜಾಹ್ನವಿ ನಾಯಕ್, ನವ್ಯ, ಚಿಂತನ, ಚೈತ್ರ ರೈ ಉಪಸ್ಥಿತರಿದ್ದರು.

RELATED NEWS

You cannot copy contents of this page