ಸೆರೆಗೀಡಾದ ಯುವತಿಗೆ ಕಿರುಕುಳ’:  ಆತ್ಮಹತ್ಯೆಗೈದ ಸಿಐ ಬರೆದಿಟ್ಟ ಪತ್ರದಲ್ಲಿ ಮೇಲಧಿಕಾರಿ ವಿರುದ್ಧ ಗಂಭೀರ ಆರೋಪ

ಪಾಲಕ್ಕಾಡ್: ಇತ್ತೀಚೆಗೆ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾದ ಪೊಲೀಸ್ ಅಧಿಕಾರಿ ಬರೆದಿಟ್ಟ ಪತ್ರವೊಂದು ಪೊಲೀಸರಿಗೆ ಲಭಿಸಿದ್ದು, ಅದರಲ್ಲಿ ಮೇಲಧಿಕಾರಿ ಯೊಬ್ಬನ ವಿರುದ್ಧ ಗಂಭೀರ ಆರೋಪಹೊರಿಸಲಾಗಿದೆ.

ಚೆರುಪುಳಶ್ಶೇರಿ ಸಿಐ ಆಗಿದ್ದ ಬಿನು ಥೋಮಸ್ ಎಂಬವರು ಬರೆದಿಟ್ಟ ಪತ್ರ ಪತ್ತೆಯಾಗಿದ್ದು ಅದರಲ್ಲಿ  ಮೇಲಧಿಕಾರಿ ಯೋರ್ವ  ಅನೈತಿಕ ದಂಧೆ  ಪ್ರಕರಣ ದಲ್ಲಿ ಸೆರೆಗೀಡಾದ ಯುವತಿಗೆ ಬೆದರಿಕೆ ಯೊಡ್ಡಿ ಕಿರುಕುಳ ನೀಡಿರುವುದಾಗಿ  ಆರೋಪಹೊರಿ ಸಲಾಗಿದೆ. ಪ್ರಸ್ತುತ ಕಲ್ಲಿಕೋಟೆ ಡಿವೈಎಸ್ಪಿಯಾಗಿರುವ ಉಮೇಶ್ ವಿರುದ್ಧ ಗಂಭೀರ ಆರೋಪ ಹೊರಿಸಲಾಗಿದೆ. ತಾಯಿ ಹಾಗೂ ಇಬ್ಬರು ಮಕ್ಕಳಿರುವ ಮನೆಗೆ ಸಂಜೆ ಹೊತ್ತಿನಲ್ಲಿ ಹೋಗಿ ಕಿರುಕುಳ ನೀಡಲಾಗಿದೆ. ಬಳಿಕ  ಕಿರುಕುಳ ನೀ ಡಲು ತನ್ನನ್ನು ಒತ್ತಾಯಿಸಿ ಬೆದರಿಕೆ ಯೊಡ್ಡಿರುವುದಾಗಿ  ದೂರಲಾಗಿದೆ. ಅನಂತರ ನಿರಂತರ ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದುದಾಗಿ ಪತ್ರದಲ್ಲಿ ಬರೆಯಲಾಗಿದೆ.

೨೦೧೪ರಲ್ಲಿ ಪಾಲಕ್ಕಾಡ್‌ನಲ್ಲಿ ಸೇವೆಯಲ್ಲಿದ್ದ ವೇಳೆ ನಡೆದ ವಿಷಯಗಳು ಪತ್ರದಲ್ಲಿದೆ. ಆರು ತಿಂಗಳ ಹಿಂದೆ ಬಿನು ಥೋಮಸ್ ವರ್ಗಾವಣೆಗೊಂಡು ಚೆರುಪುಳಶ್ಶೇರಿಯಲ್ಲಿ ಸೇವೆಗೆ ಸೇರ್ಪಡೆಗೊಂಡಿದ್ದರು.   ನವಂಬರ್ 15ರಂದು  ಮಧ್ಯಾಹ್ನ ಆಹಾರ ಸೇವಿಸಲು ತನ್ನ ಕೋಟೇಜ್‌ಗೆ ಹೋದ ಬಿನು ಥೋಮಸ್ ಮರಳಿ ಬಂದಿರಲಿಲ್ಲ. ಇದರಿಂದ ಸಹೋದ್ಯೋಗಿಗಳು ಕೋಟೇಜ್‌ಗೆ ತೆರಳಿ ಹುಡುಕಿದಾಗ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಮೃತದೇಹದ ಸಮೀಪದಲ್ಲಿ 32 ಪುಟಗಳ ಪತ್ರವೊಂದು ಪತ್ತೆಯಾಗಿತ್ತು.  ಕೌಟುಂಬಿಕ ಸಮಸ್ಯೆಗಳೇ ಆತ್ಮಹತ್ಯೆಗೆ ಕಾರಣವೆಂದು ಮೊದಲು ಪೊಲೀಸರು ತಿಳಿಸಿದ್ದರು. ಇದೇ ವೇಳೆ ಆತ್ಮಹತ್ಯೆ ಬಗ್ಗೆ ಬರೆಯಲಾದ ಪತ್ರದಲ್ಲಿನ ಮಾಹಿತಿಗಳನ್ನು ಮುಚ್ಚಿಟ್ಟು ಆರೋಪವಿಧೇಯನಾದ ವ್ಯಕ್ತಿಯನ್ನು ರಕ್ಷಿಸಲು ಇಂಟಲಿಜೆನ್ಸ್ ಪ್ರಯತ್ನಿಸಿ ರುವುದಾಗಿ ಆರೋಪವುಂಟಾಗಿದೆ.

RELATED NEWS

You cannot copy contents of this page