ಕಾಸರಗೋಡು: ಹತ್ತು ಹಾಗೂ 15 ವರ್ಷ ಪ್ರಾಯದ ಇಬ್ಬರು ಬಾಲಕರಿಗೆ ಸಲಿಂಗರತಿ ಕಿರುಕುಳ ನೀಡಿದ ಆರೋಪದಂತೆ 55ರ ಹರೆಯದ ವ್ಯಕ್ತಿ ವಿರುದ್ಧ ಮೇಲ್ಪರಂಬ ಪೊಲೀಸರು ಪೋಕ್ಸೋ ಪ್ರಕಾರ ಕೇಸು ದಾಖಲಿಸಿಕೊಂಡಿದ್ದಾರೆ. ಕಿರುಕುಳ ಕ್ಕೊಳಗಾದ ಬಾಲಕರು ಕಾಸರಗೋಡು ನಗರ ಪೊಲೀಸ್ ಠಾಣೆ ವ್ಯಾಪ್ತಿಯ ನಿವಾಸಿಗಳಾ ಗಿದ್ದಾರೆ. ಈ ಇಬ್ಬರು ಹತ್ತಿರದ ಸಂಬಂಧಿಕನಾದ 55ರ ಹರೆಯದ ವ್ಯಕ್ತಿಯ ಮನೆಗೆ ಹೋದ ಸಂದರ್ಭದಲ್ಲಿ ಹಲವು ಬಾರಿ ಕಿರುಕುಳ ನೀಡಿರುವು ದಾಗಿ ದೂರಲಾಗಿದೆ. ಆದರೆ ಭಯದಿಂದ ಕಿರುಕುಳ ಘಟನೆ ಬಗ್ಗೆ ಮಕ್ಕಳು ಯಾರಲ್ಲೂ ತಿಳಿಸಿರಲಿಲ್ಲ. ಇತ್ತೀಚೆಗೆ ಆರೋಪಿ ಮತ್ತೆ ಕಿರುಕುಳಕ್ಕೆ ಯತ್ನಿಸಿದ್ದು, ಅದನ್ನು ಬಾಲಕರು ವಿರೋಧಿಸಿದಾಗ ಆತ ಹಲ್ಲೆಗೈದಿದ್ದನೆನ್ನಲಾಗಿದೆ. ಈ ಹಲ್ಲೆಗೆ ಸಂಬಂಧಿಸಿ ಪೊಲೀಸರು ವ್ಯಕ್ತಿ ವಿರುದ್ಧ ಕೇಸು ದಾಖಲಿಸಿಕೊಂಡಿದ್ದರು. ಬಳಿಕ ಆತನನ್ನು ತನಿಖೆಗೊಳಪಡಿಸಿದಾಗ ಕಿರುಕುಳ ಮಾಹಿತಿ ಬೆಳಕಿಗೆ ಬಂದಿದ್ದು, ಈ ಹಿನ್ನೆಲೆಯಲ್ಲಿ ಪೋಕ್ಸೋ ಕೇಸು ದಾಖಲಿಸಲಾಯಿತು.







