ಉಪ್ಪಳ: ಹೊಳೆಗೆ ಬಿದ್ದ ಯುವತಿ ಯನ್ನು ರಕ್ಷಿಸಿದ ಉದಯ ಕುಮಾರ್ ಶೆಟ್ಟಿ ದೇರಂಬಳ ಹಾಗೂ ಜೋಡು ಕಲ್ಲು ಹಾಲಿನ ಸೊಸೈಟಿಯ ನಿವೃತ್ತ ಕಾರ್ಯದರ್ಶಿ ರಾಜರಾಮ್ ಬಲ್ಲಾಳ್ ರನ್ನು ಫ್ರೆಂಡ್ಸ್ ಕ್ಲಬ್ ಜೋಡುಕಲ್ಲು ಇದರ ವತಿಯಿಂದ ಸನ್ಮಾನಿಸಲಾ ಯಿತು. ಸಭೆಯಲ್ಲಿ ಕ್ಲಬ್‌ನ ಗೌರವಾಧ್ಯಕ್ಷ ದಯಾನಂದ ಮಾಡ, ಅಧ್ಯಕ್ಷ ಪ್ರೇಮ್ ಕಾಂತ್ ಶೆಟ್ಟಿ ದೇರಂಬಳ, ನಾರಾಯಣ ಕೆ ಪಿ ಪಟ್ಲ, ಅಶ್ವಿನ್ ಭಟ್ ಆಟಿಕುಕ್ಕೆ, ರವಿರಾಜ್ ನಾಯ್ಕ್ ಗುಂಡಿಬೈಲ್, ಪ್ರಭಾತ್ ರೈ ಬೊಳಂಪಾಡಿ, ತ್ಯಾಂಪಣ್ಣ ಶೆಟ್ಟಿ ದೇರಂಬಳ, ಕನ್ಯಾಕಮಾರಿ ಮಾತಾಜಿ ಉಪಸ್ಥಿತರಿದ್ದರು. ಪ್ರಶಾಂತ್ ಕೆ.ಪಿ ನಿರೂಪಿಸಿದರು. ಲೋಕೇಶ್ ನೋಂಡ ಸ್ವಾಗತಿಸಿ, ಸುರೇಶ್ ಶೆಟ್ಟಿ ಜೋಡುಕಲ್ಲು ವಂದಿಸಿದರು.







