ಗೃಹಿಣಿ ಆತ್ಮಹತ್ಯೆ: ಯೂತ್ ಕಾಂಗ್ರೆಸ್ ನೇತಾರ ಕಸ್ಟಡಿಯಲ್ಲಿ

ಪತ್ತನಂತಿಟ್ಟ:  ಗೃಹಿಣಿ ಯೋರ್ವೆ ಆತ್ಮಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿ ಯೂತ್ ಕಾಂಗ್ರೆಸ್ ನೇತಾರನನ್ನು ಪೊಲೀಸರು ಕಸ್ಟಡಿಗೆ ತೆಗೆದುಕೊಂ ಡಿದ್ದಾರೆ. ರಾಜ್ಯ ಕಾರ್ಯದರ್ಶಿ, ಕೊಲ್ಲಂ ಪೋರು ವಳಿ ನಿವಾಸಿಯಾದ ಸುಹೈಲ್ ಅನ್ಸಾರಿ ಎಂಬವರು ಏನಾತ್ ಪೊಲೀಸರ ಕಸ್ಟಡಿಯಲ್ಲಿ ದ್ದಾರೆ. ಪತ್ತನಂತಿಟ್ಟ ಕಡಂಬನಾಡ್‌ನ ೩೫ರ ಹರೆಯದ ಗೃಹಿಣಿ  ಫೆ.14 ರಂದು ಪತಿ ಮನೆಯಲ್ಲಿ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿ ದ್ದಳು.  ಯುವತಿ ಆತ್ಮಹತ್ಯೆ ಬಗ್ಗೆ ಬರೆದಿಟ್ಟ ಪತ್ರದಲ್ಲಿ ಸುಹೈಲ್‌ಅನಾರಿಯ ಹೆಸರು ಸೂಚಿಸಲಾಗಿತ್ತು. ತಾನು ಆತ್ಮಹತ್ಯೆ ಗೈಯ್ಯಲು ಸುಹೈಲ್ ಕಾರಣವೆಂದು ಪತ್ರದಲ್ಲಿ ಬರೆದಿರುವುದಾಗಿ  ಹೇಳಲಾಗುತ್ತಿದೆ. ಆದರೆ ಯುವತಿ ಹಾಗೂ ಸುಹೈಲ್ ಮಧ್ಯೆಗಿನ ಸಂ ಬಂಧವೇನೆಂದು ತಿಳಿದುಬಂದಿಲ್ಲ.

You cannot copy contents of this page