ಮಗಳ ಮನೆಯಲ್ಲಿ ಗೃಹಿಣಿ ಬೆಂಕಿ ಸುಟ್ಟು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ

ಕುಂಬಳೆ: ಮಗಳ ಮನೆಗೆ ಬಂದಿದ್ದ ಗೃಹಿಣಿ ಬಾತ್‌ರೂಂನೊಳಗೆ ಬೆಂಕಿ ಸುಟ್ಟು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಕಾಸರಗೋಡು ಸೂರ್ಲು ನಿವಾಸಿ ಕುನ್ನಿಲ್ ಮುಹಮ್ಮದ್‌ರ ಪುತ್ರಿಯಾದ ಆಸ್ಮ (53) ಮೃತಪಟ್ಟ ದುರ್ದೈವಿಯಾಗಿದ್ದಾರೆ. ಇವರು ಸೀತಾಂಗೋಳಿ ಮುಕಾರಿಕಂಡದಲ್ಲಿರುವ ಪುತ್ರಿ ಶಂಸೀನರ ಮನೆಗೆ ನಾಲ್ಕು ದಿನಗಳ ಹಿಂದೆ ಬಂದಿದ್ದರೆನ್ನಲಾಗಿದೆ. ನಿನ್ನೆ ಅಪರಾಹ್ನ 3 ಗಂಟೆಗೆ ಇವರು ಮನೆಯ ಮೇಲಿನ ಮಹಡಿಯಲ್ಲಿರುವ ಬಾತ್‌ರೂಂನೊಳಗೆ ಬೆಂಕಿ ಸುಟ್ಟು ಸಾವಿಗೀಡಾದ ಸ್ಥಿತಿಯಲ್ಲಿ ಕಂಡು ಬಂದಿದ್ದಾರೆಂದು ಹೇಳಲಾಗುತ್ತಿದೆ. ಆಸ್ಮರಿಗೆ ಅಲ್ಪ ಪ್ರಮಾಣದಲ್ಲಿ ಅಸ್ವಸ್ಥತೆ ಇತ್ತೆಂದು ಹೇಳಲಾಗುತ್ತಿದೆ. ಇದರಿಂದ ಪೆಟ್ರೋಲ್ ಸುರಿದು ದೇಹಕ್ಕೆ ಸ್ವತಃ ಕಿಚ್ಚಿಟ್ಟಿರಬಹುದೆಂದು ಸಂಶಯಿ ಸಲಾಗುತ್ತಿದೆಯೆಂದು ಪೊಲೀಸರು ತಿಳಿಸಿದ್ದಾರೆ. ಮೃತರು ಪುತ್ರ ಶಹನಾಸ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

You cannot copy contents of this page