ಪತ್ನಿ ಮೃತಪಟ್ಟ 20ನೇ ದಿನ ಪತಿ ನೇಣುಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ

ಉಪ್ಪಳ: ಪತ್ನಿ ಮೃತಪಟ್ಟ 20ನೇ ದಿನ ಪತಿ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ನಡೆದಿದೆ. ಮಂಜೇಶ್ವರ ಬಡಾಜೆ ಮಜಳಿಕೆ ನಿವಾಸಿ ಮಾಧವ (68) ಎಂಬವರು  ಸಾವಿಗೀಡಾದ ವ್ಯಕ್ತಿ. ನಿನ್ನೆ ರಾತ್ರಿ 7.30ರ ವೇಳೆ ಮನೆಯ ಬೆಡ್‌ರೂಂನ ಕಿಟಿಕಿಗೆ ನೇಣು ಬಿಗಿದ ಸ್ಥಿತಿಯಲ್ಲಿ ಇವರು ಪತ್ತೆಯಾಗಿದ್ದರು.  ಕೂಡಲೇ ಸಹೋದರರು ಮಾಧವ ರನ್ನು ಮಂಗಲ್ಪಾಡಿ ಸರಕಾರಿ ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ.

ಮಾಧವರ ಪತ್ನಿ ಉಷಾ ನವಂಬರ್ 7ರಂದು ಹೃದಯಾ ಘಾತದಿಂದ ನಿಧನಹೊಂದಿದ್ದರು. ಅನಂತರ ಇವರು ಮನೆಯಲ್ಲಿ ಏಕಾಂಗಿಯಾಗಿ ವಾಸಿಸುತ್ತಿದ್ದರು. ನಿನ್ನೆ ಸಂಜೆ ಓರ್ವ ಸಹೋದರ  ಮಾಧ ವರಿಗೆ ಫೋನ್ ಕರೆ ಮಾಡಿದ್ದರು. ಆದರೆ ಕರೆ ಸ್ವೀಕರಿಸದ ಹಿನ್ನೆಲೆಯಲ್ಲಿ ಸಹೋದರರು ಮನೆಗೆ ತೆರಳಿ ನೋಡಿದಾಗ ನೇಣು ಬಿಗಿದ ಸ್ಥಿತಿಯಲ್ಲಿ ಮಾಧವ ಪತ್ತೆಯಾಗಿದ್ದಾರೆಂದು ತಿಳಿಸಲಾಗಿದೆ. ಘಟನೆ ಬಗ್ಗೆ ಮಂಜೇ ಶ್ವರ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ದಿವಂಗತರಾದ ಮದ್ದಪ್ಪ-ರಮಣಿ ದಂಪತಿಯ ಪುತ್ರನಾದ ಮೃತರು ಸಹೋದರ-ಸಹೋದರಿ ಯರಾದ ಸತೀಶ್, ಪ್ರಕಾಶ್, ಇಂದಿರ, ಗಿರಿಜ, ಮಾಲತಿ, ಕಲಾವತಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

RELATED NEWS

You cannot copy contents of this page