ಕಾಸರಗೋಡು: ಮಲಬಾರ್ ಮುಜರಾಯಿ ಮಂಡಳಿಗೆ ಸೇರಿದ 1341 ದೇವಸ್ಥಾನಗಳಿಗೆ ಸೇರಿದ 24,693 ಎಕ್ರೆ ಜಮೀನನ್ನು ಅಕ್ರಮವಾಗಿ ಕಬಳಿಸಲಾಗಿದೆಯೆಂಬ ಸ್ಫೋಟಕ ಮಾಹಿತಿಯನ್ನು ವಿಧಾನಸಭೆಯ ಲೋಕಲ್ ಫಂಡ್ ಅಕೌಂಟ್ಸ್ ಸಮಿತಿ ವರದಿಯಲ್ಲಿ ಬಹಿರಂಗಪಡಿಸಲಾಗಿದೆ.
ಅAದರೆ ಮಲಬಾರ್ ಮುಜರಾಯಿ ಮಂಡಳಿ ವ್ಯಾಪ್ತಿಗೊಳಪಟ್ಟ ದೇವಸ್ಥಾನ ಗಳಿಗೆ ಸೇರಿದ ಒಟ್ಟು ಜಮೀನಿನ ಪೈಕಿ ಶೇ. 87ರಷ್ಟನ್ನು ಈ ರೀತಿ ಅಕ್ರಮವಾಗಿ ಕಬಳಿಸಲಾಗಿದೆ. ಆದರೆ ಇದನ್ನು ಮರು ಸ್ವಾಧೀನಪಡಿಸುವ ವಿಷಯದಲ್ಲಿ ಮುಜರಾಯಿ ಮಂಡಳಿ ನಿರ್ಲಕ್ಷ್ಯ ಹಾಗೂ ನಿರಾಸಕ್ತಿ ತೋರಿದೆಯೆಂದೂ ಸಮಿತಿಯ ವರದಿಯಲ್ಲಿ ಹೇಳಲಾಗಿದ್ದು, ಈ ವಿಷಯವನ್ನು ಸರಕಾರದ ಗಮನಕ್ಕೆ ತರಲಾಗುವುದೆಂದೂ ಸಮಿತಿ ತಿಳಿಸಿದೆ.
ದೇಗುಲಗಳಿಗೆ ಸೇರಿದ ಜಮೀನನ್ನು ಅಕ್ರಮವಾಗಿ ಕಬಳಿಸಿದ ಬಗ್ಗ್ಗೆ ಶಾಸಕ ಟಿ.ಪಿ.ರಾಮಕೃಷ್ಣನ್ ಅಧ್ಯಕ್ಷರಾಗಿರುವ ವಿಧಾನಸಭೆಯ ಲೋಕಲ್ ಫಂಡ್ ಅಕೌಂಟ್ಸ್ ಸಮಿತಿ ನಡೆಸಿದ ಪರಿಶೀಲನೆ ಯಲ್ಲಿ ಇದನ್ನು ಪತ್ತೆಹಚ್ಚಲಾಗಿದೆ. ಹೀಗೆ ದೇವಸ್ಥಾನಗಳಿಗೆ ನಷ್ಟಗೊಂಡಿರುವ ಜಮೀನನ್ನು ಮರು ಸ್ವಾಧೀನಪಡಿಸಲು ಅಗತ್ಯದ ಕ್ರಮ ಕೈಗೊಳ್ಳುವಂತೆಯೂ ಸಮಿತಿ ಸರಕಾರಕ್ಕೆ ಶಿಫಾರಸ್ಸು ಮಾಡಿದೆ.
ಮಲಬಾರ್ ಮುಜರಾಯಿ ಮಂಡಳಿ ವ್ಯಾಪ್ತಿಯಲ್ಲಿ ಒಟ್ಟು 1341 ದೇವಸ್ಥಾನಗಳಿಗೆ ಸೇರಿದ ಒಟ್ಟಾರೆ ಭೂಮಿಯ ಪೈಕಿ 24,693.24 ಎಕ್ರೆ ಜಮೀನನ್ನು ಬಾಹ್ಯ ಶಕ್ತಿಗಳು ಅಕ್ರಮವಾಗಿ ಕಬಳಿಸಿವ. ಇದರಿಂದಾಗಿ ಈ ದೇಗುಲಗಳಲ್ಲಿ ಈಗ ಕೇವಲ 3112.20 ಎಕ್ರೆ ಜಮೀನು ಮಾತ್ರವೇ ಉಳಿದುಕೊಂಡಿದೆ. ಇದರಲ್ಲಿ ಈತನಕ 3.31 ಎಕ್ರೆ ಜಮೀನನ್ನು ಮಾತ್ರವೇ ಮರುವಶಪಡಿಸಿಕೊಳ್ಳಲು ಸಾಧ್ಯವಾಗಿದೆ. ಅದಕ್ಕಿಂತ ಎಂಟು ಪಟ್ಟು ಹೆಚ್ಚು ಭೂಮಿಯನ್ನು ಅಕ್ರಮವಾಗಿ ಕಬಳಿಸಲಾಗಿದ.
ಹೀಗೆ ಕಬಳಿಸಲಾಗಿರುವ ಜಮೀನನ್ನು ಮರುಸ್ವಾಧೀನಗೊ ಳಿಸಲು ಅಗತ್ಯದ ಕ್ರಮ ಯಾಕೆ ಕೈಗೊಂಡಿಲ್ಲ ವೆಂಬ ಪ್ರಶ್ನೆಗೆ ಅದನ್ನು ಸಂರಕ್ಷಿಸಬೇಕಾದ ಅಧಿಕಾರ ಹಾಗೂ ಹೊಣೆಗಾರಿಕೆ ಕಂದಾಯ ಇಲಾಖೆಗೆ ಸೇರಿದ್ದಾಗಿದೆ ಎಂಬ ಉತ್ತರವನ್ನು ಮುಜರಾಯಿ ಮಂಡಳಿಯ ಆಯುಕ್ತರು ನೀಡಿದ್ದಾರೆ. ಮಾತ್ರವಲ್ಲ ಹೀಗೆ ಅಕ್ರಮವಾಗಿ ಕಬಳಿಸಲಾಗಿರುವ ಜಮೀನನ್ನು ಮರುಸ್ವಾಧೀನಪಡಿಸಿ ಕೊಳ್ಳಲು ಲ್ಯಾಂಡ್ ಕರ್ಸರ್ವೆನ್ಸಿ (ಎಲ್ಸಿ) ಯೂನಿಟ್ ಆರಂಭಿಸುವ ಬಗ್ಗೆ ರಾಜ್ಯ ಕಂದಾಯ ಇಲಾಖೆ ಸಂಬAಧಪಟ್ಟ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಾ ಗಿದೆ. ಹೀಗೆ ಅಕ್ರಮವಾಗಿ ಕೈವಶಪಡಿ ಸಿಕೊಂ ಡಿರುವ ಭೂಮಿಯ ಬಗ್ಗೆ ಸರ್ವೇ ನಡೆಸಿ ಅದನ್ನು ಕೈವಶವಿರಿಸಿ ಕೊಂಡ ವರನ್ನು ತೆರವುಗೊಳಿಸುವ ವಿಶಷ ಅಧಿಕಾರವನ್ನು ನಾವು ಹೊಂದಿಲ್ಲವೆAದೂ ಆಯುಕ್ತರು ತಿಳಿಸಿದ್ದಾರೆ.







