ಬದಿಯಡ್ಕ: ಅಸೌಖ್ಯ ತಗಲಿ ಚಿಕಿತ್ಸೆಗೆ ದಾಖಲಿಸಿದ್ದ ಚೆನ್ನಾರಕಟ್ಟೆ ನಿವಾಸಿ, ಸಂಘದ ಸಕ್ರಿಯ ಕಾರ್ಯ ಕರ್ತ ರವಿಕುಮಾರ್ ಯಾನೆ ಚಿನ್ನತಂಬಿ (20) ನಿಧನ ಹೊಂದಿದರು. ದಿ| ಗಣೇಶರ ಪುತ್ರನಾಗಿದ್ದಾರೆ. ಅಸೌಖ್ಯ ನಿಮಿತ್ತ ಕಾಸರಗೋಡು ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಮೃತರು ತಾಯಿ ಮಹೇಶ್ವರಿ, ಸಹೋದರರಾದ ಮಣಿ, ರಂಜಿತ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.







