ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದಲ್ಲಿ ಪ್ರತಿಷ್ಠಾ ವರ್ಧಂತ್ಯುತ್ಸವ, ನಿಧಿ ಸಮರ್ಪಣೆ

ಉಪ್ಪಳ: ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದಲ್ಲಿ ವೇದಮಾತೆ ಶ್ರೀ ಗಾಯತ್ರಿ ದೇವಿ ಹಾಗೂ ಭಗವಾನ್ ಶ್ರೀ ನಿತ್ಯಾನಂದ ಗುರುದೇವರ ಪ್ರತಿಷ್ಟಾ ವರ್ಧಂತ್ಯುತ್ಸವ ನವ ಚಂಡಿಕಾಯಾಗ , ಗಾಯತ್ರೀ ದೇವಿಯ ನೂತನ ಗರ್ಭಗೃಹಕ್ಕೆ ನಿಧಿ ಸಮರ್ಪಣೆ ಹಾಗೂ 20ನೇ ವರ್ಷದ ಅಖಂಡ ಭಜನಾ ಸಪ್ತಾಹ ಫೆ.22ರಂದು ನಡೆಯಲಿದೆ. ಪ್ರಾತಕಾಲ 7ರಿಂದ ಪ್ರಾರ್ಥನೆ, ಪುಣ್ಯಾಹ, ಗಣಯಾಗ, ವಿವಿಧ ವೈಧಿಕ ಕಾರ್ಯಕ್ರಮಗಳು, 7.30ಕ್ಕೆ ಚಂಡಿಕಾ ಯಾಗ ಪ್ರಾರಂಭ, ಪೂರ್ವಹ್ನ 10.30ಕ್ಕೆ ಪೂರ್ಣಾಹುತಿ, 11ಕ್ಕೆ ನಡೆಯುವ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ ಆಶೀರ್ವಚನ ನೀಡುವರು. ಕಟೀಲು ಕ್ಷೇತ್ರದ ಅನುವಂಶಿಕ ಪ್ರಧಾನ ಅರ್ಚಕ ಬ್ರಹ್ಮಶ್ರೀ ಅನಂತಪದ್ಮನಾಭ ಅಸ್ರಣ್ಣ ಉಪಸ್ಥಿತರಿರುವರು. ಮಾಜಿ ರಾಜ್ಯಸಭಾ ಸದಸ್ಯ ಡಾ.ಕೆ.ಸಿ ರಾಮ ಮೂರ್ತಿ ಅಧ್ಯಕ್ಷತೆ ವಹಿಸುವರು. ಡಾ.ಎಸ್.ಎಸ್.ವಿ.ಎಲ್ ನರಸಿಂಹ ರಾಜು ಬೆಂಗಳೂರು ನಿಧಿ ಸಮರ್ಪ ಣೆಗೆ ಚಾಲನೆ ನೀಡುವರು. ಪದ್ಮಶ್ರೀ ಪುರಸ್ಕöÈತ ಎಸ್.ಜಿ. ಸುಶೀಲಮ್ಮ ಇವರನ್ನು ಸನ್ಮಾನಿಸಲಾಗುವುದು.

ಕೆ.ನಾರಾಯಣ ಬೆಂಗಳೂರು, ಸದಾಶಿವ ಶೆಟ್ಟಿ ಕುಳೂರು ಕನ್ಯಾನ, ಕೆ.ಕೆ ಶೆಟ್ಟಿ, ರಘುರಾಮ್ ಕೆ.ಶೆಟ್ಟಿ ಕುಳೂರು ಕನ್ಯಾನ, ಡಾ.ಜಿ ರಮೇಶ್, ಬಿ ನಾಗರಾಜ್, ಚಂದ್ರಶೇಖರ್ ಶೆಟ್ಟಿ ಮುಂಡ್ಕೂರು, ಜಯ ಕೆ.ಶೆಟ್ಟಿ, ಇ.ಎಸ್.ರಾಮ್ ಭಟ್ ಬೆಂಗಳೂರು, ಎ.ಜೆ ಶೇಖರ್, ಮೋಹನ ಶೆಟ್ಟಿ ಮಜ್ಜಾರು, ಶಶಿಧರ ಶೆಟ್ಟಿ ಗ್ರಾಮಚಾವಡಿ, ಲಕ್ಷ÷್ಮಣ ರಾವ್ ಬೆಂಗಳೂರು, ರಾಜೇಶ್ ಕೆ.ರೈ ಉಪಸ್ಥಿತ ರಿರುವರು. ಮಧ್ಯಾಹ್ನ 12.30ಕ್ಕೆ ಮಹಾಪೂಜೆ, ಅನ್ನಸಂತರ್ಪಣೆ, ಸಂಜೆ 6.30ಕ್ಕೆ ನಕ್ಷತ್ರ ವನದಲ್ಲಿ ನವಗ್ರಹ ಪೂಜೆ, ದೀಪೋತ್ಸವ, ರಾತ್ರಿ 9ಕ್ಕೆ ರಾತ್ರಿ ಪೂಜೆ, ಸಂಜೆ 6.37ಕ್ಕೆ ಅಖಂಡ ಭಜನಾ ಸಪ್ತಾಹವನ್ನು ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ ದೀಪ ಪ್ರಜ್ವಲನೆಗೊಳಿಸುವ ಮೂಲಕ ಭಜನೆ ಪ್ರಾರಂಭಗೊಳ್ಳಲಿದೆ. ಬಳಿಕ ವಿವಿಧ ಭಜನಾ ತಂಡಗಳಿAದ ಭಜನಾ ಸಂಕೀರ್ತನೆ, ಪ್ರತೀ ದಿನ ಜಾಮ ಪೂಜೆ, ಮಧ್ಯಾಹ್ನ ಪೂಜೆ, ಅನ್ನದಾನ ನಡೆಯಲಿದೆ. ಮಾ.1ರಂದು ಸಂಜೆ 6.38ಕ್ಕೆ ಭಜನಾ ಮಂಗಲಾಚರಣೆ ನಡೆಯಲಿದೆ.

You cannot copy contents of this page