ಅಪಾಯಕಾರಿ ರೀತಿಯಲ್ಲಿ ಸಂಚರಿಸಿದ ಥಾರ್‌ಜೀಪು ತಡೆದು ನಿಲ್ಲಿಸಿದ ನಾಗರಿಕರು :ಮದ್ಯದಮಲಿನಲ್ಲಿದ್ದ ಚಾಲಕ ಕಸ್ಟಡಿಗೆ

ಕಾಸರಗೋಡು: ಮದ್ಯದ ಅಮಲಿ ನಲ್ಲಿ  ಅಪಾಯಕರ ರೀತಿಯಲ್ಲಿ ಥಾರ್‌ಜೀಪು  ಚಲಾಯಿಸಿದ ವ್ಯಕ್ತಿಯನ್ನು ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿ ದ್ದಾರೆ. ತಮಿಳುನಾಡಿನ ಧರ್ಮಪುರಿ ನಿವಾಸಿ ಬಿ. ಶ್ಯಾಮ್‌ರಾಜ್ (55) ಎಂಬಾತ ಪೊಲೀಸ್ ಕಸ್ಟಡಿಯಲ್ಲಿರುವ ವ್ಯಕ್ತಿ.  ಎದ್ದು ನಿಲ್ಲಲು ಕೂಡಾ ಸಾಧ್ಯವಾಗದ ರೀತಿಯಲ್ಲಿ  ಈತ ಮದ್ಯದಮಲಿ ನಲ್ಲಿದ್ದನು. ನಿನ್ನೆ ಸಂಜೆ ಈತ ಅಪರಿಮಿತ ವೇಗದಲ್ಲಿ ಜೀಪು ಚಲಾಯಿಸುತ್ತಿದ್ದನೆನ್ನಲಾಗಿದೆ. ಜೀಪಿನ ಒಂದು ಟಯರ್ ಹಾನಿಗೀಡಾದ  ಸ್ಥಿತಿಯಲ್ಲಿತ್ತು. ಇದು ಗಮನಕ್ಕೆ ಬಂದ ನಾಗರಿಕರು ಪರಪ್ಪ ಶಾಲೆ ಸಮೀಪ ಜೀಪನ್ನು ತಡೆದು ನಿಲ್ಲಿಸಿದ್ದಾರೆ. ಬಳಿಕ ನಾಗರಿಕರು ನೀಡಿದ ಮಾಹಿತಿಯಂತೆ ವೆಳ್ಳರಿಕುಂಡ್ ಪೊಲೀಸರು ಸ್ಥಳಕ್ಕೆ ತಲುಪಿದ್ದರು. ಜೀಪಿ ನಿಂದ ಹೊರಗಿಳಿದ ತಕ್ಷಣ ಚಾಲಕ ರಸ್ತೆ ಯಲ್ಲಿ ಕುಸಿದುಬಿದ್ದಿದ್ದನು.  ಮದ್ಯದಮಲಿ ನಲ್ಲಿ ದ್ದುದು ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಈತನನ್ನು ಕಸ್ಟಡಿಗೆ ತೆಗೆಯಲಾಗಿದೆ.

RELATED NEWS

You cannot copy contents of this page