ಕಾಸರಗೋಡು: ಕಬಡ್ಡಿ ಟೂರ್ನಮೆಂಟ್‌ಗೆ ತೋರಣಕಟ್ಟುತ್ತಿದ್ದ ವೇಳೆ ರಾಜ್ಯ ಕಬಡ್ಡಿ ಕ್ರೀಡಾಪಟು ಕುಸಿದುಬಿದ್ದು ಮೃತಪಟ್ಟ ಘಟನೆ ನಡೆದಿದೆ. ಕಾಞಂಗಾಡ್ ಪಡನ್ನ ಕ್ಕಾಡ್ ಅನಂತಂಪಳ್ಳದ ಸತೀಶನ್-ಪುಷ್ಪ ದಂಪತಿಯ ಪುತ್ರನೂ ಪ್ಲಸ್‌ವನ್ ವಿದ್ಯಾರ್ಥಿಯಾದ ನಿತಿನ್‌ಕೃಷ್ಣ (16) ಮೃತಪಟ್ಟ ದುರ್ದೈವಿ. ಅನಂತಂಪಳ್ಳ ಶಬರಿ ಕ್ಲಬ್‌ನ ಸಮೀಪ ಲೆಜೆಂಡ್ ಒಕ್ಕೂಟ ಇಂದು ಹಮ್ಮಿಕೊಂಡ ಕಬಡ್ಡಿ ಟೂರ್ನಮೆಂಟ್‌ಗಾಗಿ ತೋರಣ ಕಟ್ಟುತ್ತಿದ್ದ ವೇಳೆ ನಿತಿನ್‌ಕೃಷ್ಣ ಕುಸಿದುಬಿದ್ದಿದ್ದರು. ಕೂಡಲೇ ಅವರನ್ನು ನೀಲೇಶ್ವರದ ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ.
ಕಲ್ಲಿಕೋಟೆ ಮುಕ್ಕಂ ವೊಕೇಶನಲ್ ಹೈಯರ್ ಸೆಕೆಂಡರಿ ಶಾಲೆಯ ಪ್ಲಸ್‌ವನ್ ವಿದ್ಯಾರ್ಥಿ ಯಾದ ನಿತಿನ್‌ಕೃಷ್ಣ ಎರಡು ದಿನಗಳ ರಜೆಯಲ್ಲಿ ಅನಂತಂಪಳ್ಳದಲ್ಲಿರುವ ತಾಯಿಯ ಮನೆಗೆ ಬಂದಿದ್ದರು.
ಇವರ ತಂದೆ ಪಯ್ಯನ್ನೂರು ಮಾತಮಂಗಲ ನಿವಾಸಿಯಾಗಿದ್ದಾರೆ.






